ನಿರಂಜನಾತೀತ ಐಕ್ಯಂಗೆ ನಿರಂಜನಾತೀತವೇ ಅಂಗ,
ನಿರಂಜನಾತೀತವೇ ಹಸ್ತ, ನಿರಂಜನಾತೀತವೆ ಮಹಾಲಿಂಗ.
ನಿರಂಜನಾತೀತವೆಂಬ ಮುಖದಲ್ಲಿ
ನಿರಂಜನಾತೀತಾನಂದವೆಂಬ ಸುಖವ ಸಮರ್ಪಣಂ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Niran̄janātīta aikyaṅge niran̄janātītavē aṅga,
niran̄janātītavē hasta, niran̄janātītave mahāliṅga.
Niran̄janātītavemba mukhadalli
niran̄janātītānandavemba sukhava samarpaṇaṁ māḍi,
tr̥ptiyane bhōgisuvanu nōḍā
apramāṇakūḍalasaṅgamadēvā.