Index   ವಚನ - 659    Search  
 
ನಿರಂಜನಾತೀತಶರಣಂಗೆ ನಿರಂಜನಾತೀತವೆ ಅಂಗ, ನಿರಂಜನಾತೀತವೆ ಹಸ್ತ, ನಿರಂಜನಾತೀತವೆ ಪ್ರಸಾದಲಿಂಗ. ನಿರಂಜನಾತೀತವೆಂಬ ಮುಖದಲ್ಲಿ ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.