Index   ವಚನ - 666    Search  
 
ಜಾಗ್ರದಲ್ಲಿಯ ಸ್ವಪ್ನವಾವುದು? ಶಬ್ದಾದಿಗಳೈದು, ಶ್ರೋತ್ರಾದಿಗಳೈದು, ವಚನಾದಿಗಳೈದು, ವಾಗಾದಿಗಳೈದು, ಕರಣ ನಾಲ್ಕು, ಪುರುಷನೊಬ್ಬ, ಇಂತೀ ಇಪ್ಪತ್ತೈದು ಕರಣಂಗಳೊಡನೆ ಕೂಡಿ ಅವರ ಕಂಡ ಠಾವನು ಹೇಳುವುದು ಜಾಗ್ರದಲ್ಲಿಯ ಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.