Index   ವಚನ - 680    Search  
 
ಇನ್ನು ಶುದ್ಧಾವಸ್ಥೆಯ ದರ್ಶನವೆಂತೆಂದಡೆ: ಮುಂದೆ ಹೇಳಿದ ಕೇವಲದಲ್ಲಿ ಒಂದೆಂಬುದು ಕೆಟ್ಟ ಠಾವನು ಸಕಲದಲ್ಲಿ ಕರಣಂಗಳ ಕೂಟವನು ಬಿಟ್ಟು, ಈ ಎರಡವಸ್ಥೆಯು ಇವನಿಗೆ ಪ್ರತಿ ಇಲ್ಲವೆಂದು ಕಂಡುದು ಶುದ್ಧಾವಸ್ಥೆ ನೋಡಾ ಅಪ್ರಮಾಣಕೂಡಲಸಂಗಮದೇವಾ.