Index   ವಚನ - 679    Search  
 
ಇನ್ನು ಕೇವಲಾವಸ್ಥೆಯ ದರ್ಶನವದೆಂತೆಂದಡೆ: ಮುಂದೆ ಹೇಳಿದ ಅವಸ್ಥೆಗಳನು ಬಿಟ್ಟು ಬೇರಾಗಿ ಒಂದೆಂಬುದು ಕೆಟ್ಟ ಠಾವು ಕೇವಲಾವಸ್ಥೆ. ಇನ್ನು ಸಕಲಾವಸ್ಥೆಯ ದರ್ಶನವದೆಂತೆಂದಡೆ: ಮುಂದೆ ಹೇಳಿದ ಅರಿವೇ ಸ್ವರೂಪವಾಗಿ ಆತನ ಕಂಡ ಠಾವು ಸಕಲಾವಸ್ಥೆ ನೋಡಾ ಅಪ್ರಮಾಣಕೂಡಲಸಂಗಮದೇವಾ.