Index   ವಚನ - 684    Search  
 
ಅವಸ್ಥೆಗಳಿಪ್ಪತ್ತುನಾಲ್ಕನು ಹೀಂಗೆ ದರ್ಶನವ ಮಾಡಿದಾತನು ಶಿವಮುಕ್ತನು, ಆತನು ಶಿವಯೋಗಿ ಲಿಂಗಾನುಭಾವಿ. ಆ ಶಿವಮುಕ್ತನಿಗೆ ಪಂಚಮಲಂಗಳು ಪಂಚಶಕ್ತಿಗಳು ಬಿಟ್ಟ ಪ್ರಕಾರ ದರ್ಶನವದೆಂತೆಂದಡೆ: ಮುಂದೆ ಇದ್ದ ಮಾಯಾಭೋಗದ ಇಚ್ಛೆಯಿಲ್ಲದಿಹುದೆ ತಿರೋಧಾನಮಲ ನಷ್ಟ, ಕರ್ಮವ ತೊರೆದು ಸುಖದುಃಖಗಳು ಸಮವಾಗಿ ಪಂಚಕೃತ್ಯಂಗಳು ಕೆಟ್ಟುದಾಗಿ, ಮಹಾಮಾಯೆ ನಷ್ಟ ನೋಡಾ ಅಪ್ರಮಾಣಕೂಡಲಸಂಗಮದೇವಾ.