Index   ವಚನ - 683    Search  
 
ಆ ಪರಮಭೋಗಿಯಲ್ಲಿಯೆ ಸಂತೋಷವಳಿದು ನಿಷ್ಪತ್ತಿಯಾಗಿ ನಿಂದುದೆ ನಿರ್ಮಲಸುಷುಪ್ತಿ. ಮುಂದೆ ಹೇಳಿದ ಪರಮಭೋಗವನು ಬಿಟ್ಟು ಮೇಲಾದ ಪರಮಾನಂದಕ್ಕೆ ಮೊದಲು ನಿರ್ಮಲತೂರ್ಯ, ಮುಂದೆ ಹೇಳಿದ ಪರಮಾನಂದವ ಸುಟ್ಟ ಠಾವು ನಿರ್ಮಲ ತೂರ್ಯಾತೀತ ನೋಡಾ ಅಪ್ರಮಾಣಕೂಡಲಸಂಗಮದೇವಾ.