Index   ವಚನ - 694    Search  
 
ನಿರಾಮಯದೊಳು ಹುಟ್ಟಿತು ನೋಡಾ ಒಂದು ಪದ್ಮ. ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿ ಆ ಪದ್ಮ ಹನ್ನೆರಡೆಸಳಾಗಿಹುದು. ಎಂಟೆಸಳೆ ಅಧೋಮುಖವಾಗಿಹುದು. ಅದು ಅಷ್ಟದಳಕಮಲ. ನಾಲ್ಕೆಸಳೆ ಊಧ್ರ್ವಮುಖವಾಗಿಹುದು; ಅದು ಚೌಕಮಧ್ಯ. ಎಂಟೆಸಳ ನಾಲ್ಕೆಸಳ ಸಂಯೋಗವೇ ನಿರಾಳಪ್ರಣಮ ನೋಡಾ. ಆ ಪುಷ್ಪದ ಸದ್ವಾಸನೆ ತಾನೆ ನಮ್ಮ ಅಪ್ರಮಾಣಕೂಡಲಸಂಗಮದೇವಾ.