ನಿರಾಳದಷ್ಟದಳದ ಕಮಲದೊಳು
ನಿರಂಜನ ಚೌಕಮಧ್ಯ ನೋಡಾ.
ಅದರ ಬೀಜಾಕ್ಷರದ ಭೇದವನು ಆರು ಬಲ್ಲರು ?
ನಿರಂಜನಪ್ರಣವ ಅವಾಚ್ಯಪ್ರಣವ ಕಲಾಪ್ರಣವ
ಅನಾದಿಪ್ರಣವ ಅಕಾರಪ್ರಣವ ಉಕಾರಪ್ರಣವ
ಮಕಾರಪ್ರಣವ ಆದಿಪ್ರಣವ
ಅಖಂಡಗೊಳಕಾಕಾರಪ್ರಣವ, ಜ್ಯೋತಿಪ್ರಣವ,
ಅಖಂಡ ಮಹಾಜ್ಯೋತಿಪ್ರಣವ,
ನಿರಾಳ ಅಷ್ಟದಳ ಕಮಲ ನಿರಂಜನ
ಚೌಕಮಧ್ಯದ ಬೀಜಾಕ್ಷರದ ಭೇದವ
ನಿಜಲಿಂಗೈಕ್ಯರು ಬಲ್ಲರಲ್ಲದೆ ಮಿಕ್ಕಿನ ವೇಷಧಾರಿಗಳವರೆತ್ತ
ಬಲ್ಲರಯ್ಯ ಅಪ್ರಮಾಣಕೂಡಲಸಂಗಮದೇವಾ
Art
Manuscript
Music
Courtesy:
Transliteration
Nirāḷadaṣṭadaḷada kamaladoḷu
niran̄jana caukamadhya nōḍā.
Adara bījākṣarada bhēdavanu āru ballaru?
Niran̄janapraṇava avācyapraṇava kalāpraṇava
anādipraṇava akārapraṇava ukārapraṇava
makārapraṇava ādipraṇava
akhaṇḍagoḷakākārapraṇava, jyōtipraṇava,
akhaṇḍa mahājyōtipraṇava,
nirāḷa aṣṭadaḷa kamala niran̄jana
caukamadhyada bījākṣarada bhēdava
nijaliṅgaikyaru ballarallade mikkina vēṣadhārigaḷavaretta
ballarayya apramāṇakūḍalasaṅgamadēvā