Index   ವಚನ - 695    Search  
 
ನಿರಾಳದಷ್ಟದಳದ ಕಮಲದೊಳು ನಿರಂಜನ ಚೌಕಮಧ್ಯ ನೋಡಾ. ಅದರ ಬೀಜಾಕ್ಷರದ ಭೇದವನು ಆರು ಬಲ್ಲರು ? ನಿರಂಜನಪ್ರಣವ ಅವಾಚ್ಯಪ್ರಣವ ಕಲಾಪ್ರಣವ ಅನಾದಿಪ್ರಣವ ಅಕಾರಪ್ರಣವ ಉಕಾರಪ್ರಣವ ಮಕಾರಪ್ರಣವ ಆದಿಪ್ರಣವ ಅಖಂಡಗೊಳಕಾಕಾರಪ್ರಣವ, ಜ್ಯೋತಿಪ್ರಣವ, ಅಖಂಡ ಮಹಾಜ್ಯೋತಿಪ್ರಣವ, ನಿರಾಳ ಅಷ್ಟದಳ ಕಮಲ ನಿರಂಜನ ಚೌಕಮಧ್ಯದ ಬೀಜಾಕ್ಷರದ ಭೇದವ ನಿಜಲಿಂಗೈಕ್ಯರು ಬಲ್ಲರಲ್ಲದೆ ಮಿಕ್ಕಿನ ವೇಷಧಾರಿಗಳವರೆತ್ತ ಬಲ್ಲರಯ್ಯ ಅಪ್ರಮಾಣಕೂಡಲಸಂಗಮದೇವಾ