ನಿರಾಮಯದೊಳು ಹುಟ್ಟಿತು ನೋಡಾ ಒಂದು ಪದ್ಮ.
ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿ
ಆ ಪದ್ಮ ಹನ್ನೆರಡೆಸಳಾಗಿಹುದು.
ಎಂಟೆಸಳೆ ಅಧೋಮುಖವಾಗಿಹುದು.
ಅದು ಅಷ್ಟದಳಕಮಲ.
ನಾಲ್ಕೆಸಳೆ ಊಧ್ರ್ವಮುಖವಾಗಿಹುದು;
ಅದು ಚೌಕಮಧ್ಯ.
ಎಂಟೆಸಳ ನಾಲ್ಕೆಸಳ ಸಂಯೋಗವೇ ನಿರಾಳಪ್ರಣಮ ನೋಡಾ.
ಆ ಪುಷ್ಪದ ಸದ್ವಾಸನೆ ತಾನೆ ನಮ್ಮ
ಅಪ್ರಮಾಣಕೂಡಲಸಂಗಮದೇವಾ.