Index   ವಚನ - 698    Search  
 
ಈಶಾನಮುಖದಲ್ಲಿ ಈಶಾನಮಂತ್ರ ಉತ್ಪತ್ಯವಾಯಿತ್ತು. ತತ್ಪುರುಷಮುಖದಲ್ಲಿ ತತ್ಪುರುಷಮಂತ್ರ ಉತ್ಪತ್ಯವಾಯಿತ್ತು. ಅಘೋರಮುಖದಲ್ಲಿ ಅಘೋರಮಂತ್ರ ಉತ್ಪತ್ಯವಾಯಿತ್ತು. ವಾಮದೇವಮುಖದಲ್ಲಿ ವಾಮದೇವಮಂತ್ರ ಉತ್ಪತ್ಯವಾಯಿತ್ತು. ಸದ್ಯೋಜಾತಮುಖದಲ್ಲಿ ಸದ್ಯೋಜಾತಮಂತ್ರ ಉತ್ಪತ್ಯವಾಯಿತ್ತು. ಈ ಹನ್ನೊಂದು ಮಂತ್ರವು ಸಪ್ತಕೋಟಿ ಮಹಾಮಂತ್ರಗಳ ಸಾರವಾದಂಥಾದ್ದು. ಇದು ಮಂತ್ರಾಧ್ವ ನೋಡಾ ಅಪ್ರಮಾಣಕೂಡಲಸಂಗಮದೇವಾ.