Index   ವಚನ - 699    Search  
 
ಇನ್ನು ತೊಂಬತ್ತುನಾಲ್ಕು ವ್ಯೋಮವ್ಯಾಪಿ ಪದಂಗಳುತ್ಪತ್ಯವದೆಂತೆಂದಡೆ: ಅನೇಕಕೋಟಿ ಸೂರ್ಯಚಂದ್ರಾಗ್ನಿಮಯವಾಗಿಹ ಮಹಾಜ್ಯೋತಿರ್ಮಯಲಿಂಗದಲ್ಲಿ ತೊಂಬತ್ತುನಾಲ್ಕು ವ್ಯೋಮವ್ಯಾಪಿ ಪದಂಗಳುತ್ಪತ್ಯ. ತೊಂಬತ್ತುನಾಲ್ಕು ವ್ಯೋಮವ್ಯಾಪಿಪದಂಗಳ ವಿವರವದೆಂತೆಂದಡೆ: ವ್ಯೋಮವ್ಯಾಪಿನೇ ವ್ಯೋಮರೂಪಾಯ ಸರ್ವವ್ಯಾಪಿನೇ ಶಿವಾಯ ಈಶಾನ ಮೂರ್ಧ್ನಾಯ ತತ್ಪುರುಷವಕ್ತ್ರಾಯ ಅಘೋರ ಹೃದಯಾಯ ವಾಮದೇವ ಗುಹ್ಯಾಯ ಸದ್ಯೋಜಾತಮೂರ್ತಯೇ ಓಂ ನಮೋ ನಮಃ || ಗುಹ್ಯಾತಿಗುಹ್ಯಾಯ ಗೌಪ್ತೇ ಅಭಿಧಾನಾಯ ಸರ್ವಯೋಗಾಧಿಕೃತಾಯ ಜ್ಯೋತಿರೂಪಾಯ ಪರಮೇಶ್ವರ ಪರಾಯ ಚೇತನಾಚೇತನ ವ್ಯೋಮಿನ್ ವ್ಯಾಪಿನ್ ರೂಪಿನ್ ಅರೂಪಿನ್ ಪ್ರಥಮ ಪ್ರಥಮ | ತೇಜಸ್ತೇಜಃ ಜ್ಯೋತಿರ್ಜ್ಯೋತಿಃ ಅರೂಪ ಅನಿಲೀನ ಅಧೂಮ ಅಭಸ್ಮ ಅನಾದೇರನಾದೆ ನಾ ನಾ ನಾ ಧೂ ಧೂ ಧೂ ಓಂ ಭೂಃ ಓಂ ಭುವಃ ಓಂ ಸ್ವಾಹಾ | ಅನಿಧನ ನಿಧನೋದ್ಭವ ಶಿವಃ ಶರ್ವ ಪರಮಾತ್ಮಾ ಮಹೇಶ್ವರ ಮಹೇಶ್ವರ ಮಹಾತೇಜ ಮಹಾತೇಜ ಯೋಗಾಧಿಪತೇ ಮುಂಚ ಮುಂಚ ಪ್ರಮಥ ಪ್ರಮಥ ಶರ್ವ ಶರ್ವ ಭವ ಭವ ಭವೋದ್ಭವ ಸರ್ವಭೂತಸುಖಪ್ರದ ಸರ್ವಸಾನಿಧ್ಯಕರ, ಬ್ರಹ್ಮವಿಷ್ಣುರುದ್ರಪರ ಅರ್ಚಿತಸ್ತುತ ಪೂರ್ವಸ್ಥಿತ ಸಾಕ್ಷಿಹಿ ಸಾಕ್ಷಿಹಿ ತರುತರು ಪತಂಗ ಪತಂಗ ಪಿಂಗ ಪಿಂಗ ಜ್ಞಾನ ಜ್ಞಾನ, ಶಬ್ದ ಶಬ್ದ, ಸೂಕ್ಷ್ಮ ಸೂಕ್ಷ್ಮ ಶಿವ ಶರ್ವ ಶರ್ವ ಓಂ ನಮಃಶಿವಾಯ | ಓಂ ನಮಃಶಿವಾಯ, ನಮೋ ನಮಃ ಓಂ ||'' ಅಂತು ತೊಂಬತ್ತುನಾಲ್ಕು ವ್ಯೋಮವ್ಯಾಪಿ ಪದಂಗಳು. ಇದು ಪದಾಧ್ವ ನೋಡಾ, ಅಪ್ರಮಾಣಕೂಡಲಸಂಗಮದೇವಾ.