Index   ವಚನ - 700    Search  
 
ಇನ್ನು ಐವತ್ತೆರಡು ಅಕ್ಷರವದೆಂತೆಂದಡೆ: ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಾಸ್ವರೂಪದ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು. ಆ ಅಕಾರ ಉಕಾರ ಮಕಾರ ಈ ಮೂರೂ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾಯಿತ್ತು. ಆ ಓಂಕಾರಪ್ರಣವದ ತಾರಕಾಸ್ವರೂಪದಲ್ಲಿಹ ನಕಾರದಲ್ಲಿ ನಕಾರ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಸ್ವರೂಪದಲ್ಲಿಹ ಮಕಾರದಲ್ಲಿ ಮಕಾರ ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರ ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರ ಉತ್ಪತ್ಯವಾಯಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನೀಲಕಂಠೋತ್ತರಸಾರೇ: ನಕಾರೇ ನಕಾರೋತ್ಪನ್ನಂ ಮಕಾರೇ ಮಕಾರೋದ್ಭವಃ | ಶಿಕಾರೇ ಶಿಕಾರೋತ್ಪನ್ನಂ ವಕಾರೇ ವಕಾರೋದ್ಭವಃ | ಯಕಾರೋ ಶಿಕಾರೋತ್ಪನ್ನಂ ಗುಹ್ಯಾದ್ಗುಹ್ಯಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.