ಇನ್ನು ಇನ್ನೂರ ಇಪ್ಪತ್ತುನಾಲ್ಕು ಭುವನಂಗಳ ಉತ್ಪತ್ಯವೆಂತೆಂದಡೆ:
ಅಖಂಡ ಜ್ಯೋತಿರ್ಮಯವಾಗಿಹ ಮಹದೋಂಕಾರ ಪ್ರಣವದಲ್ಲಿ
ಇನ್ನೂರು ಇಪ್ಪತ್ತುನಾಲ್ಕು ಭುವನ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಮಹಾಪ್ರಳಯಕಾಲರುದ್ರೋಪನಿಷತ್:
ಮಹದೋಂಕಾರಪ್ರಣವದಲ್ಲಿ-
ದ್ವಿಶತಶ್ಚತುರ್ವಿಂಶತಿಭುವನಾ ಭವಂತಿ | ಓಂ ಪ್ರಾಣವಾತ್ಮಾ ದೇವತಾ |
ಓಂಕಾರೇ ಚ ಲಯಂ ಪ್ರಾಪ್ತೇ ಪಂಚವಿಂಶತ್ಪ್ರಣವಾಂಶಕೇ ||''
ಇಂತೆಂದು ಶ್ರುತಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu innūra ippattunālku bhuvanaṅgaḷa utpatyaventendaḍe:
Akhaṇḍa jyōtirmayavāgiha mahadōṅkāra praṇavadalli
innūru ippattunālku bhuvana utpatyavāyittu nōḍā.
Idakke mahāpraḷayakālarudrōpaniṣat:
Mahadōṅkārapraṇavadalli-
dviśataścaturvinśatibhuvanā bhavanti | ōṁ prāṇavātmā dēvatā |
ōṅkārē ca layaṁ prāptē pan̄cavinśatpraṇavānśakē ||''
intendu śruti,
apramāṇakūḍalasaṅgamadēvā.