Index   ವಚನ - 701    Search  
 
ಪ್ರಣವದ ಜ್ಯೋತಿಸ್ವರೂಪದಲ್ಲಿಹ ಚಿದಾತ್ಮ ಪರಮಾತ್ಮನಲ್ಲಿ ಹಂ ಕ್ಷಂ ಹಂ ಳಂ ಎಂಬ ಚತುರಾಕ್ಷರ ಉತ್ಪತ್ಯವಾಯಿತ್ತು. ಆ ಯಕಾರದಲ್ಲಿ ಉತ್ಪತ್ಯವಾದ ಯಕಾರ ಬೀಜದಲ್ಲಿ ಅ ಆ ಇ ಈ ಉ ಊ ಋ ಋೂ ಲೃ ಲೄ ಏ ಐ ಓ ಔ ಅಂ ಅಃ ಎಂಬ ಷೋಡಶ ವರ್ಣಾಕ್ಷರ ಉತ್ಪತ್ಯವಾಯಿತ್ತು. ಆ ವಕಾರದಲ್ಲಿ ಉತ್ಪತ್ಯವಾದ ವಕಾರ ಬೀಜದಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟ ಠ ಎಂಬ ದ್ವಾದಶವರ್ಣಾಕ್ಷರ ಉತ್ಪತ್ಯವಾಯಿತ್ತು. ಆ ಶಿಕಾರದಲ್ಲಿ ಉತ್ಪತ್ಯವಾದ ಶಿಕಾರ ಬೀಜದಲ್ಲಿ ಡ ಢ ಣ ತ ಥ ದ ಧ ನ ಪ ಫ ಎಂಬ ದಶವರ್ಣಾಕ್ಷರ ಉತ್ಪತ್ಯವಾಯಿತ್ತು. ಆ ಮಕಾರದಲ್ಲಿ ಉತ್ಪತ್ಯವಾದ ಮಕಾರ ಬೀಜದಲ್ಲಿ ಬ ಭ ಮ ಯ ರ ಲ ಎಂಬ ಷಡುವರ್ಣಾಕ್ಷರ ಉತ್ಪತ್ಯವಾಯಿತ್ತು. ಆ ನಕಾರದಲ್ಲಿ ಉತ್ಪತ್ಯವಾದ ನಕಾರ ಬೀಜದಲ್ಲಿ ವ ಶ ಷ ಸ ಎಂಬ ಚತುರ್ವರ್ಣಾಕ್ಷರ ಉತ್ಪತ್ಯವಾಯಿತ್ತು. ಈ ಐವತ್ತೆರಡು ವರ್ಣಾಕ್ಷರವು ವರ್ಣಾಧ್ವ ನೋಡಾ. ಇದಕ್ಕೆ ಶಿವಾಗಮಸೂತ್ರೇ: ಹಂ ಕ್ಷಂ ದ್ವಿವರ್ಣಕಂ ಚೈವ ಪರಮಾತ್ಮನಿ ಜಾಯತೇ | ಹಂ ಳಂ ದ್ವಿವರ್ಣಕಂ ಚಾಪಿ ಜೀವಾತ್ಮನಿ ಚ ಜಾಯತೇ || ಅ ಆ ಇ ಈ ಉ ಊ ವರ್ಣಂ ಚ ಋ ಋೂ ಲೃ ಲೄ ವರ್ಣಕಂ ತಥಾ | ಏ ಐ ಓ ಔ ಅಂ ಅಃ ವರ್ಣಂ ಯಕಾರಂ ಚಾಪಿ ಜಾಯತೇ || ಕ ಖ ಗ ಘ ಙ ವರ್ಣಂ ಚ ಛ ಜ ಝ ಞ ವರ್ಣಕಂ | ಟ ಠ ದ್ವಿವರ್ಣಕಂ ಚೈವ ವಕಾರೇ ಚ ಸಜಾಯತೇ || ಡ ಢ ಣ ತ ಥ ವರ್ಣಂ ಚ ದ ಧ ನ ಪ ಫ ವರ್ಣಂ | ಬ ಭ ಮ ಯ ರ ವರ್ಣಂ ಚ ಲ ಏಕೋ ವರ್ಣಕಂ ತಥಾ | ಇತಿ ಷಡ್‌ವರ್ಣಕಂ ಚೈವ ಮಕಾರೇ ಚ ಸಜಾಯತೇ || ಇತಿ ವರ್ಣಂ ಸಮುತ್ಪನ್ನಂ ವರ್ಣಾಧ್ವಂ ಚ ಪ್ರಕೀರ್ತಿತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.