ಇನ್ನು ಮೂವತ್ತಾರು ತತ್ತ್ವಂಗಳುತ್ಪತ್ಯವದೆಂತೆಂದಡೆ:
ಪರಶಿವತತ್ವ ತಾನೆ ತನ್ನ ಲೀಲಾವಿನೋದಕ್ಕೆ
ಸಕಲನಿಃಕಲತತ್ವವಾಯಿತ್ತು.
ಸಕಲನಿಃಕಲತತ್ವದಲ್ಲಿ ಮೂವತ್ತಾರು ತತ್ವಂಗಳುತ್ಪತ್ಯವಾಯಿತ್ತು.
ಆ ನಿಃಕಲತತ್ವದಲ್ಲಿ ದಶತತ್ವ ಉತ್ಪತ್ಯವದೆಂತೆಂದಡೆ:
ಪರಾಶಕ್ತಿ ಸದಾಶಿವ ಈಶ್ವರ ಶುದ್ಧವಿದ್ಯೆ ಮಾಯೆ ಕಾಲ ನಿಯತಿ
ಕಲೆ ವಿದ್ಯೆ ರಾಗ-ಈ ದಶತತ್ವಂಗಳು
ನಿಃಕಲತತ್ವದಲ್ಲಿ ಹುಟ್ಟಿತ್ತು ನೋಡಾ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu mūvattāru tattvaṅgaḷutpatyavadentendaḍe:
Paraśivatatva tāne tanna līlāvinōdakke
sakalaniḥkalatatvavāyittu.
Sakalaniḥkalatatvadalli mūvattāru tatvaṅgaḷutpatyavāyittu.
Ā niḥkalatatvadalli daśatatva utpatyavadentendaḍe:
Parāśakti sadāśiva īśvara śud'dhavidye māye kāla niyati
kale vidye rāga-ī daśatatvaṅgaḷu
niḥkalatatvadalli huṭṭittu nōḍā,
apramāṇakūḍalasaṅgamadēvā.