Index   ವಚನ - 705    Search  
 
ಇನ್ನು ಸಕಲತತ್ವದಲ್ಲಿ ಇಪ್ಪತ್ತುನಾಲ್ಕುತತ್ವ ಉತ್ಪತ್ಯವದೆಂತೆಂದಡೆ; ಗುಣತ್ರಯ ಬುದ್ಧಿ ಅಹಂಕಾರ ಚಿತ್ತ ಶ್ರೋತ್ರ ತ್ವಕ್ಕು ಚಕ್ಷು ಜಿಹ್ವೆ ಘ್ರಾಣ ವಾಕ್ಕು ಪಾಣಿ ಪಾದ ಪಾಯು ಗುಹ್ಯ ಶಬ್ದ ಸ್ಪರ್ಶ ರೂಪು ರಸ ಗಂಧ ಆಕಾಶ ವಾಯು ತೇಜ ಅಪ್ಪು ಪೃಥ್ವಿ. ಈ ಇಪ್ಪತ್ತುನಾಲ್ಕು ತತ್ವಂಗಳು ಸಕಲತತ್ವದಲ್ಲಿ ಉತ್ಪತ್ಯವಾಯಿತ್ತು. ಆ ಸಕಲ ನಿಃಕಲತತ್ವ ಮೊದಲಾಗಿ ರಾಗ ಪೃಥ್ವಿತತ್ವ ಕಡೆಯಾಗಿ ಈ ಮೂವತ್ತಾರು ತತ್ವವು ತತ್ವಾಧ್ವ ನೋಡಾ ಅಪ್ರಮಾಣಕೂಡಲಸಂಗಮದೇವಾ.