Index   ವಚನ - 706    Search  
 
ಇನ್ನು ಷಟ್‍ಕಲೆಗಳುತ್ಪತ್ಯವದೆಂತೆಂದಡೆ: ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ಜ್ಯೋತಿಸ್ವರೂಪದಲ್ಲಿ ಶಾಂತ್ಯತೀತೋತ್ತರಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಶಾಂತ್ಯತೀತಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಶಾಂತಿಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ವಿದ್ಯಾಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಸ್ವರೂಪದಲ್ಲಿ ಪ್ರತಿಷ್ಠಾಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ನಿವೃತ್ತಿಕಲೆ ಉತ್ಪತ್ಯವಾಯಿತ್ತು. ಅಂತು ಈ ಷಟ್‍ಕಲಾ ನಾಮಂಗಳು ಕಲಾಧ್ವ ನೋಡಾ. ಇದಕ್ಕೆ ನಿಷ್ಕಲಾತೀತಾಗಮೇ: ಓಂಕಾರ ಜ್ಯೋತಿರೂಪೇ ಚ ಮಹತಿರ್ಜಾಯತೇ ಕಲಾ | ಓಂಕಾರ ದರ್ಪಣಾಕಾರೇ ಶಾಂತ್ಯತೀತಾ ಚ ಜಾಯತೇ || ಓಂಕಾರ ಅರ್ಧಚಂದ್ರೇ ಚ ಕಲಾಶಾಂತಿ ಚ ಜಾಯತೇ | ಓಂಕಾರ ಕುಂಡಲಾಕಾರೇ ಕಲಾವಿದ್ಯಾ ಚ ಜಾಯತೇ | ಓಂಕಾರ ದಂಡರೂಪೇ ಚ ಪ್ರತಿಷ್ಠಾ ಜಾಯತೇ ಕಲಾ || ಓಂಕಾರ ತಾರಕಾರೂಪೇ ನಿವೃತ್ತಿರ್ಜಾಯತೇ ಕಲಾ | ಇತಿ ಷಷ್ಠಕಲಾದೇವೀ ಸ್ಥಾನಸ್ಥಾನೇಷು ಜಾಯತೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.