ಈ ಮಂತ್ರಾಧ್ವ ಪದಾಧ್ವವ ತನ್ನಲ್ಲಿ ತಿಳಿದು
ಅನುಭವಿಸಬಲ್ಲಾತನ ಆಚಾರ್ಯನೆಂಬೆ;
ವರ್ಣಾಧ್ವ ಭುವನಾಧ್ವವ ತನ್ನಲ್ಲಿ ತಿಳಿದು
ಅನುಭವಿಸಬಲ್ಲಾತನ ಆಚಾರ್ಯನೆಂಬೆ;
ತತ್ತ್ವಾಧ್ವ ಕಲಾಧ್ವವ ತನ್ನಲ್ಲಿ ತಿಳಿದು
ಅನುಭವಿಸಬಲ್ಲಾತನ ಆಚಾರ್ಯನೆಂಬೆ;
ಈ ಷಡಧ್ವವ ತನ್ನಲ್ಲಿ ತಿಳಿದು ಅನುಭವಿಸಬಲ್ಲಾತನ ಜಗದಾರಾಧ್ಯನೆಂಬೆ.
ಈ ಷಡಧ್ವವ ತನ್ನಲ್ಲಿ ತಿಳಿದು ಅನುಭವಿಸಲರಿಯದೆ
ಆಚಾರ್ಯರೆಂಬ ಅನಾಚಾರ್ಯರ ಮೆಚ್ಚುವನೆ
ನಮ್ಮ ಅಪ್ರಮಾಣಕೂಡಲಸಂಗಮದೇವ?