Index   ವಚನ - 712    Search  
 
ಅಲ್ಲಿಂಗದ ಮೇಲೆ ಆಜ್ಞಾಚಕ್ರದ ಚತುರ್ದಳಪದ್ಮದ ಮಧ್ಯದಲ್ಲಿಹ ಮಂತ್ರ ಹೃದಯ ಶಿರ ಶಿಖಾ ಕವಚ ನೇತ್ರಾಸ್ತ್ರಗಳೆಂಬ ಆರು ಮಂತ್ರ. ಅಲ್ಲಿಹ ಪದ- ಪರಮಾತ್ಮ, ಮಹೇಶ್ವರ, ಮಹೇಶ್ವರ, ಮಹಾತೇಜ, ಮಹಾತೇಜ, ಯೋಗಾಧಿಪತೇ ಮುಂಚ ಮುಂಚ ಪ್ರಮಥ ಪ್ರಮಥ ಶರ್ವ ಶರ್ವ ಭವ ಭವ ಭವೋದ್ಭವ ಸರ್ವಭೂತ ಸುಖಪ್ರದ ಸರ್ವಸಾನ್ನಿಧ್ಯಕರ ಬ್ರಹ್ಮ ವಿಷ್ಣು ರುದ್ರಪರ ಅರ್ಚಿತ ಸ್ತುತಾ ಪೂರ್ವಸ್ಥಿತ ಸಾಕ್ಷಿಹಿ ಸಾಕ್ಷಿಹಿ ತುರುತುರು ಪತಂಗ ಪತಂಗ ಪೂರ್ವಸ್ಥಿತ ಸಾಕ್ಷಿಹಿ ಸಾಕ್ಷಿಹಿ ತುರುತುರು ಪತಂಗ ಪತಂಗ ಪಿಂಗ ಪಿಂಗ ಜ್ಞಾನ ಜ್ಞಾನ ಶಬ್ದ ಶಬ್ದ ಸೂಕ್ಷ್ಮ ಸೂಕ್ಷ್ಮ ಶಿವ ಶರ್ವ ಶರ್ವ ಓಂ ನಮಃಶಿವಾಯ, ಓಂ ನಮಃಶಿವಾಯ ನಮೋ ನಮಃ ಓಂ'' ಎಂಬ ನಲ್ವತ್ತಾರು ಪದ. ಅಲ್ಲಿಹ ವರ್ಣ-ಹಂ ಳಂ ಹಂ ಕ್ಷಂ ಎಂಬ ನಾಲ್ಕು ವರ್ಣ. ``ಅಲ್ಲಿಹ ಭುವನ-ಕರ್ತೃ, ಹರ, ಮೃತ್ಯು, ಯಾಮ್ಯ, ಕ್ಷಯಾಂತಕ, ಭಸ್ಮಾಂತಕ, ಪಿಂಗ, ಹುತಾಶನ, ಜಯರುದ್ರ, ತ್ರಿದಶಾಧಿಪ, ಪಿನಾಕಿ, ಶಾಸ್ತ್ರ, ಅವ್ಯಯ, ವಿಭೂತಿ, ಪ್ರಮರ್ಧ, ವಜ್ರದೇಹ, ಬುಧ, ಅಜಕಪಾಲಿ, ಈಶ್ವರ, ರುದ್ರ, ವಿಷ್ಣು, ಬ್ರಹ್ಮ, ಹಾಟಕ, ಕೂಷ್ಮಾಂಡ, ಕಾಲಾಗ್ನಿರುದ್ರ, ಪ್ರಳಯಕಾಲ, ಮಹಾರುದ್ರನೆಂಬ ಮೂವತ್ತೆರಡು ಭುವನ. ಅಲ್ಲಿಹ ತತ್ವ-ಪರಶಿವ, ಪರಾಶಕ್ತಿ , ಸದಾಶಿವ, ಈಶ್ವರ, ಮನ, ಶುದ್ಧವಿದ್ಯೆ, ಮಾಯೆ, ಕಾಲ ಹನ್ನೆರಡು ನಿಯತಿ ಕಲೆ ವಿದ್ಯೆ ರಾಗವೆಂಬ ಹನ್ನೊಂದು ತತ್ತ್ವ ಅಲ್ಲಿಹ ಕಲೆ-ಶಾಂತ್ಯತೀತೋತ್ತರ ಕಲೆ ನೋಡಾ ಅಪ್ರಮಾಣಕೂಡಲಸಂಗಮದೇವಾ