ವ್ಯೋಮವ್ಯಾಪಿ ಮೊದಲಾಗಿ ಓಂಕಾರವೆಂಬ ಪದ ಕಡೆಯಾಗಿ
ಈ ತೊಂಬತ್ನಾಲ್ಕು ವ್ಯೋಮವ್ಯಾಪಿಪದಂಗಳು
ಅನೇಕಕೋಟಿ ಸೂರ್ಯಚಂದ್ರಾಗ್ನಿ
ಪ್ರಕಾಶವಾಗಿ ಮಹಾಜ್ಯೋತಿರ್ಮಯಲಿಂಗದಲ್ಲಿ
ಅಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಚತುಃಷಷ್ಠಿಪದಂ ಚೈವ ದಶವಿಂಶತ್ಪದಂ ತಥಾ |
ಇತಿ ಪದಾಧ್ವಕಂ ದೇವಿ ಲಿಂಗಗರ್ಭೆ ವಿಲೀಯತೇ || ''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Vyōmavyāpi modalāgi ōṅkāravemba pada kaḍeyāgi
ī tombatnālku vyōmavyāpipadaṅgaḷu
anēkakōṭi sūryacandrāgni
prakāśavāgi mahājyōtirmayaliṅgadalli
aḍagittu nōḍā.
Idakke mahāvātulāgamē:
Catuḥṣaṣṭhipadaṁ caiva daśavinśatpadaṁ tathā |
iti padādhvakaṁ dēvi liṅgagarbhe vilīyatē ||''
intendudāgi,
apramāṇakūḍalasaṅgamadēvā.