Index   ವಚನ - 718    Search  
 
ವ ಶ ಷ ಸ ಎಂಬ ಚತುವರ್ಣಾಕ್ಷರವು ಆಧಾರಚಕ್ರದ ನಕಾರಬೀಜದಲ್ಲಿ ಅಡಗಿತ್ತು. ಬ ಭ ಮ ಯ ರ ಲ ಎಂಬ ಷಡುವರ್ಣಾಕ್ಷರವು ಸ್ವಾಧಿಷ್ಠಾನಚಕ್ರದ ಮಕಾರಬೀಜದಲ್ಲಿ ಅಡಗಿತ್ತು. ಡ ಢ ಣ ತ ಥ ದ ಧ ನ ಪ ಫ ಎಂಬ ದಶಾಕ್ಷರವು ಮಣಿಪೂರಕಚಕ್ರದ ಶಿಕಾರಬೀಜದಲ್ಲಿ ಅಡಗಿತ್ತು ನೋಡಾ ಇದಕ್ಕೆ ಉತ್ತರ ವಾತುಲಾಗಮೇ: ವ ಶ ಷ ಸಾಖ್ಯ ವರ್ಣಾಶ್ಚ ನಕಾರೇ ಚ ವಿಲೀಯತೇ | ಬ ಭ ದ್ವೇ ಮ ಯ ರ ಲ ಶ್ಚ ಮಕಾರೇ ಚ ವಿಲೀಯತೇ || ಡ ಢ ಣ ಸ್ತಥಾವರ್ಣಾಶ್ಚ ದ ಧ ಪ ಫ ವರ್ಣಕಂ | ಇತ್ಯೇತೇ ದಶವರ್ಣಾಶ್ಚ ಶಿಕಾರೇ ಚ ಲಯಂ ಗತಾಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.