Index   ವಚನ - 728    Search  
 
ಗುಹ್ಯ ಚಿಹ್ವೆ ಬುದ್ಧಿ ರಸ ಅಪ್ಪು ವಿಷ್ಣು ಈ ಆರು ತತ್ತ್ವಂಗಳು ಆ ಅಖಂಡ ಮಹಾಜ್ಯೋತಿಪ್ರಣವದ ದಂಡಕಸ್ವರೂಪವಾಗಿಹ ಪಿಂಡಬ್ರಹ್ಮದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ವಿಷ್ಣುರಾಪೋ ರಸೋ ಬುದ್ಧಿಃ ಜಿಹ್ವಾ ಗುಹ್ಯ ಸ್ತಥೈವ ಚ | ಷಟ್‌ತತ್ತ್ವಮಿದಂ ಪ್ರೋಕ್ತಂ ಪಿಂಡಬ್ರಹ್ಮಣಿ ಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.