Index   ವಚನ - 729    Search  
 
ಗುದ ಘ್ರಾಣ ಚಿತ್ತ ಗಂಧ ಪೃಥ್ವಿ ಬ್ರಹ್ಮ ಆ ಆರು ತತ್ತ್ವಂಗಳು ಆ ಅಖಂಡ ಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ ಮೂರ್ತಿಬ್ರಹ್ಮದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಧಾತಾ ಧಾತ್ರೀಚ ಗಂಧಂ ಚ ಚಿತ್ತಂ ಘ್ರಾಣಗುದಸ್ತಥಾ | ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮಣಿ ಲೀಯತೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.