Index   ವಚನ - 736    Search  
 
ಇನ್ನು ಷಡುಶಕ್ತಿಗಳ ನಿವೃತ್ತಿ ಅದೆಂತೆಂದಡೆ: ಜ್ಞಾನಶಕ್ತಿಯ ಸಹಸ್ರಾಂಶದಲ್ಲಿ ಕ್ರಿಯಾಶಕ್ತಿಯಡಗಿದಳು. ಇಚ್ಛಾಶಕ್ತಿಯ ಸಹಸ್ರಾಂಶದಲ್ಲಿ ಜ್ಞಾನಶಕ್ತಿಯಡಗಿದಳು. ಆದಿಶಕ್ತಿಯ ಸಹಸ್ರಾಂಶದಲ್ಲಿ ಇಚ್ಛಾಶಕ್ತಿಯಡಗಿದಳು. ಪರಾಶಕ್ತಿಯ ಸಹಸ್ರಾಂಶದಲ್ಲಿ ಆದಿಶಕ್ತಿಯಡಗಿದಳು. ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ಸಹಸ್ರಾಂಶದಲ್ಲಿ ಚಿಚ್ಛಕ್ತಿಯಡಗಿದಳು. ಆ ನಿಃಶಬ್ದವೆಂಬ ಪರಬ್ರಹ್ಮದ ಚಿಂತೆಯು ಅಡಗಿ ಶೂನ್ಯ ನಿಶ್ಯೂನ್ಯವಾಗಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ: ಜ್ಞಾನಶಕ್ತಿಃ ಸಹಸ್ರಾಂಶೇ ಕ್ರಿಯಾಶಕ್ತಿಶ್ಚ ಲೀಯತೇ | ಇಚ್ಛಾಶಕ್ತಿ ಸಹಸ್ರಾಂಶೇ ಜ್ಞಾನಶಕ್ತಿಶ್ಚ ಲೀಯತೇ || ಆದಿಶಕ್ತಿ ಸಹಸ್ರಾಂಶೇ ಇಚ್ಛಾಶಕ್ತಿಶ್ಚ ಲೀಯತೇ | ಪರಾಶಕ್ತಿ ಸಹಸ್ರಾಂಶೇ ಆದಿಶಕ್ತಿಶ್ಚ ಲೀಯತೇ || ಚಿಚ್ಛಕ್ತಿ ಸಹಸ್ರಾಂಶೇ ಪರಾಶಕ್ತಿಶ್ಚ ಲೀಯತೇ | ಚಿಂತಾಶಕ್ತಿಸಹಸ್ರಾಂಶೇ ಚಿಚ್ಛಕ್ತಿಶ್ಚ ವಿಲೀಯತೇ | ನಿಶ್ಶಬ್ದಬ್ರಹ್ಮಚಿಂತಾಯಾಂ ನಿಶ್ಚಿಂತಂ ಪರಮಂ ಪದಂ ||'' ಇಂತೆಂದುದಾಗಿ, ಇದಕ್ಕೆ ಶ್ರುತಿ: ''ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ |'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.