ಇನ್ನು ಷಡ್ವಿಧಹಸ್ತನಿವೃತ್ತಿ ಅದೆಂತೆಂದಡೆ:
ಆ ಪ್ರಣವದ ತಾರಕಸ್ವರೂಪದಲ್ಲಿ ಸುಚಿತ್ತಹಸ್ತವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರಹಸ್ತವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನಹಸ್ತವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಸುಜ್ಞಾನಹಸ್ತವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಸದ್ಭಾವಹಸ್ತವಡಗಿತ್ತು ನೋಡಾ.
ಇದಕ್ಕೆ ಚಿತ್ಪಿಂಡಾಗಮೇ:
''ಚಿತ್ತಂ ಬುದ್ಧಿರಹಂಕಾರಂ ಮನೋ ಜ್ಞಾನಂ ಚ ಭಾವಕಂ |
ಇತಿ ಷಷ್ಠಕರಂ ದೇವಿ ಓಂಕಾರೇ ಚ ಲಯಂ ಗತಾಃ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.