Index   ವಚನ - 739    Search  
 
ಇನ್ನು ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನಿವೃತ್ತಿ ಅದೆಂತೆಂದಡೆ: ಆ ಪ್ರಣವದ ತಾರಕಸ್ವರೂಪದಲ್ಲಿ ಭಕ್ತನಡಗಿದನು. ಆ ಪ್ರಣವದ ದಂಡಕಸ್ವರೂಪದಲ್ಲಿ ಮಾಹೇಶ್ವರನಡಗಿದನು. ಆ ಪ್ರಣವದ ಕುಂಡಲಾಕಾರದಲ್ಲಿ ಪ್ರಸಾದಿಯಡಗಿದನು. ಆ ಪ್ರಣವದ ಅರ್ಧಚಂದ್ರಕದಲ್ಲಿ ಪ್ರಾಣಲಿಂಗಿಯಡಗಿದನು. ಆ ಪ್ರಣವದ ದರ್ಪಣಾಕಾರದಲ್ಲಿ ಶರಣನಡಗಿದನು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಐಕ್ಯನಡಗಿದನು ನೋಡಾ. ಇದಕ್ಕೆ ಉತ್ತರವಾತುಲಾಗಮೇ: ಭಕ್ತೋ ಮಹೇಶ್ವರಶ್ಚೈವ ಪ್ರಸಾದಿಪ್ರಾಣಲಿಂಗಿಕಃ | ತಥಾ ಶರಣಂ ಚೈಕ್ಯಂಚ ಓಂಕಾರಗರ್ಭೆ ಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.