Index   ವಚನ - 747    Search  
 
ಇನ್ನು ವಿಂಶತಿಕಮಲದಳಾಕ್ಷರಂಗಳ ನಿವೃತ್ತಿ ಅದೆಂತೆಂದಡೆ: `ವಶಷಸ' ಎಂಬ ಚತುರಾಕ್ಷರವು ಆಧಾರಚಕ್ರದ ನಕಾರಬೀಜದಲ್ಲಿ ಅಡಗಿತ್ತು. `ಬಭಮಯರಲ' ಎಂಬ ಷಡಾಕ್ಷರವು ಸ್ವಾಧಿಷ್ಠಾನಚಕ್ರದ ಮಕಾರಬೀಜದಲ್ಲಿ ಅಡಗಿತ್ತು. `ಡಢಣತಥದಧನಪಫ' ಎಂಬ ದಶಾಕ್ಷರವು ಮಣಿಪೂರಕಚಕ್ರದ ಶಿಕಾರಬೀಜದಲ್ಲಿ ಅಡಗಿತ್ತು. `ಕಖಗಘಙ ಚಛಜಝಞ ಟಠ' ಎಂಬ ದ್ವಾದಶಾಕ್ಷರವು ಅನಾಹತಚಕ್ರದ ವಕಾರಬೀಜದಲ್ಲಿ ಅಡಗಿತ್ತು. `ಅಆ ಇಈ ಉಊ ಋಋೂ ಲೃಲೄ ಏಐ ಓಔ ಅಂಆಃ' ಎಂಬ ಷೋಡಶಾಕ್ಷರವು ವಿಶುದ್ಧಿಚಕ್ರದ ಯಕಾರಬೀಜದಲ್ಲಿ ಅಡಗಿತ್ತು. `ಹಂ ಳಂ ಹಂ ಕ್ಷಂ' ಎಂಬ ಚತುರಾಕ್ಷರವು ಆಜ್ಞಾಚಕ್ರದ ಓಂಕಾರಬೀಜದ ಜ್ಯೋತಿಸ್ವರೂಪದಲ್ಲಿಹ ಚಿದಾತ್ಮ ಪರಮಾತ್ಮದಲ್ಲಿ ಅಡಗಿತ್ತು. ದಶದಳದ ಶತಾಕ್ಷರಂಗಳು ಸ್ವಯಾತ್ಮದಲ್ಲಿ ಅಡಗಿತ್ತು. ಸಹಸ್ರದಳ ತ್ರಿಸಹಸ್ರಾಕ್ಷರವು ಪರತತ್ವದಲ್ಲಿ ಅಡಗಿತ್ತು. ತ್ರಿದಳ ತ್ರಿಯಕ್ಷರಂಗಳು ವಿಶ್ವಾತ್ಮಕದಲ್ಲಿ ಅಡಗಿತ್ತು. ಏಕದಳದ ಏಕಾಕ್ಷರಂಗಳು ಸರ್ವಾತ್ಮದಲ್ಲಿ ಅಡಗಿತ್ತು. ತ್ರಿಸಹಸ್ರದಳದ ತ್ರಿಸಹಸ್ರಾಕ್ಷರವು ನಿರ್ಗುಣಾತ್ಮತತ್ವದಲ್ಲಿ ಅಡಗಿತ್ತು. ಲಕ್ಷದಳದ ಲಕ್ಷಾಕ್ಷರಂಗಳು ನಿಃಕಳಾತ್ಮತತ್ವದಲ್ಲಿ ಅಡಗಿತ್ತು. ಕೋಟಿದಳದ ಕೋಟಿ ಅಕ್ಷರಂಗಳು ಶಿವಾತ್ಮತತ್ವದಲ್ಲಿ ಅಡಗಿತ್ತು. ಅರ್ಬುದದಳದ ಅರ್ಬುದಾಕ್ಷರಂಗಳು ಮಹಾತತ್ವದಲ್ಲಿ ಅಡಗಿತ್ತು. ಖರ್ವದಳದ ಖರ್ವಾಕ್ಷರಂಗಳು ನಿರಾಮಯಾತ್ಮತತ್ವದಲ್ಲಿ ಅಡಗಿತ್ತು. ಮಹಾಖರ್ವದಳದ ಮಹಾಖರ್ವಾಕ್ಷರಂಗಳು ನಿರಾತ್ಮತತ್ವದಲ್ಲಿ ಅಡಗಿತ್ತು. ಪದ್ಮದಳದ ಪದ್ಮಾಕ್ಷರಂಗಳು ನಿರಾಕಾರತತ್ವದಲ್ಲಿ ಅಡಗಿತ್ತು. ಕ್ಷೋಣಿದಳದ ಕ್ಷೋಣಿ ಅಕ್ಷರಂಗಳು ಅಚಲಾತ್ಮತತ್ವದಲ್ಲಿ ಅಡಗಿತ್ತು. ಕ್ಷಿತಿದಳದ ಕ್ಷಿತಿ ಅಕ್ಷರಂಗಳು ಅಖಂಡಾತ್ಮತತ್ವದಲ್ಲಿ ಅಡಗಿತ್ತು. ಮಹಾಕ್ಷಿತಿದಳದ ಮಹಾಕ್ಷಿತಿ ಅಕ್ಷರಂಗಳು ಪರಕೆಪರವಾಗಿಹ ಪರಬ್ರಹ್ಮದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ವ ಶಃ ಷ ಸಾಖ್ಯ ವರ್ಣಾಶ್ಚ ನಕಾರೇ ಚ ವಿಲೀಯತೇ | ಬ ಭ ದ್ವಯೇ ಮಯರಲಶ್ಚ ಮಕಾರೇ ಚ ವಿಲೀಯತೇ || ಡಢಣಸ್ತಥ ವರ್ಣಂ ಚ ದಧನ ಪಫ ವರ್ಣಕಂ | ಇತ್ಯೇತೇ ದಶವರ್ಣಾಶ್ಚ ಶಿಕಾರೇ ಚ ವಿಲೀಯತೇ || ಕಖದ್ವಯಂ ಗಘೊಙಶ್ಚ ಚಛ ದ್ವೇ ಜಝಞಸ್ತಥಾ | ಟಠ ದ್ವಿವರ್ಣಕಂಚೈವ ವಕಾರೇಚ ವಿಲೀಯತೇ || ಅಆ ಇಈ ಉಊ ವರ್ಣಂ ಋಋೂ ಚ ಲೃಲೄ ತಥಾ | ಏಐ ಓಔ ತಥಾ ಅಂ ಆಃ ಯಕಾರೇ ಚ ವಿಲೀಯತೇ || ಹಂ ಕ್ಷಂ ದ್ವಿವರ್ಣಕಂ ಚೈವ ಪರಮಾತ್ಮನಿ ಚ ವಿಲೀಯತೇ | ಹಂ ಳಂ ದ್ವಿವರ್ಣಕಂ ಚೈವ ಚಿದಾತ್ಮನಿ ಲಯಂ ತಥಾ || ಚತುಃಷಷ್ಠಿಮಾತೃಕಂ ಚೈವ ತತ್ವಾತ್ಮನಿ ವಿಲೀಯತೇ | ಶತದಳಾಕ್ಷರಂ ಚೈವ ಸ್ವಯಾತ್ಮನಿ ವಿಲೀಯತೇ || ಸಹಸ್ರಾಕ್ಷರಾತ್ಮಾಚ್ಚೈವ ಪರತತ್ವೇ ವಿಲೀಯತೇ | ತಥಾ ತ್ರಿಯಕ್ಷರಂ ಚೈವ ವಿಶ್ವಾತ್ಮನಿ ವಿಲೀಯತೇ || ಏಕದಳಾಕ್ಷರಂ ಚೈವ ಸರ್ವಾತ್ಮನಿ ವಿಲೀಯತೇ | ತ್ರಿಸಹಸ್ರಾಕ್ಷರಂ ಚೈವ ನಿರ್ಗುಣಾತ್ಮನಿ ಲೀಯತೇ || ತಥಾ ಲಕ್ಷಾಕ್ಷರಂ ಚೈವ ನಿಃಕಳಾತ್ಮನಿ ಲೀಯತೇ | ಕೋಟಿದಳಾಕ್ಷರಂ ಚೈವ ಶಿವತತ್ವೇ ಚ ಲೀಯತೇ || ಅರ್ಬುದಮಾತೃಕಂ ಚೈವ ನಿರಾಕಾರೇ ಲಯಂ ತಥಾ | ಕ್ಷೋಣಿದಳಾಕ್ಷರಂ ದೇವಿ ಅಚಲಾತ್ಮನಿ ಲೀಯತೇ || ಕ್ಷಿತಿದಳಾಕ್ಷರಂ ಚೈವ ಅಖಂಡಾತ್ಮನಿ ಲೀಯತೇ | ಮಹಾಕ್ಷಿತಿಲಿಪಿಶ್ಚೈವ ಪರಬ್ರಹ್ಮಣಿ ಲೀಯತೇ | ಇತಿ ಲಿಪಿಲಯಂ ಜ್ಞಾತುಂ ಸುಸೂಕ್ಷ್ಮಂ ಶ್ರುಣು ಪಾರ್ವತೀ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.