Index   ವಚನ - 746    Search  
 
ಇನ್ನು ದ್ವಿದಶಕಮಲಂಗಳ ನಿವೃತ್ತಿ ಅದೆಂತೆಂದಡೆ: ಚತುರ್ದಳಪದ್ಮ ಷಡುದಳಪದ್ಮದಲ್ಲಿ ಅಡಗಿತ್ತು. ಆ ಷಡ್ದಳಪದ್ಮ ದಶದಳಪದ್ಮದಲ್ಲಿ ಅಡಗಿತ್ತು. ಆ ದಶದಳಪದ್ಮ ದ್ವಾದಶದಳಪದ್ಮದಲ್ಲಿ ಅಡಗಿತ್ತು. ಆ ದ್ವಾದಶದಳಪದ್ಮ ಷೋಡಶದಳಪದ್ಮದಲ್ಲಿ ಅಡಗಿತ್ತು. ಆ ಷೋಡಶದಳಪದ್ಮ ದ್ವಿದಳಪದ್ಮದಲ್ಲಿ ಅಡಗಿತ್ತು. ಆ ದ್ವಿದಳಪದ್ಮ ಚೌಷಷ್ಠಿದಳಪದ್ಮದಲ್ಲಿ ಅಡಗಿತ್ತು. ಆ ಚೌಷಷ್ಠಿದಳಪದ್ಮ ಶತದಳಪದ್ಮದಲ್ಲಿ ಅಡಗಿತ್ತು. ಆ ಶತದಳಪದ್ಮ ಸಹಸ್ರದಳಪದ್ಮದಲ್ಲಿ ಅಡಗಿತ್ತು. ಆ ಸಹಸ್ರದಳಪದ್ಮ ತ್ರಿದಳಪದ್ಮದಲ್ಲಿ ಅಡಗಿತ್ತು. ಆ ತ್ರಿದಳಪದ್ಮ ಏಕದಳಪದ್ಮದಲ್ಲಿ ಅಡಗಿತ್ತು. ಆ ಏಕದಳಪದ್ಮ ತ್ರಿಸಹಸ್ರದಳಪದ್ಮದಲ್ಲಿ ಅಡಗಿತ್ತು. ಆ ತ್ರಿಸಹಸ್ರದಳಪದ್ಮ ಲಕ್ಷದಳಪದ್ಮದಲ್ಲಿ ಅಡಗಿತ್ತು. ಆ ಲಕ್ಷದಳಪದ್ಮ ಕೋಟಿದಳಪದ್ಮದಲ್ಲಿ ಅಡಗಿತ್ತು. ಆ ಕೋಟಿದಳಪದ್ಮ ಅರ್ಬುದದಳಪದ್ಮದಲ್ಲಿ ಅಡಗಿತ್ತು. ಆ ಅರ್ಬುದದಳಪದ್ಮ ಖರ್ವದಳಪದ್ಮದಲ್ಲಿ ಅಡಗಿತ್ತು. ಆ ಖರ್ವದಳಪದ್ಮ ಮಹಾಖರ್ವದಳಪದ್ಮದಲ್ಲಿ ಅಡಗಿತ್ತು. ಆ ಮಹಾಖರ್ವದಳಪದ್ಮ ಪದ್ಮದಳಪದ್ಮದಲ್ಲಿ ಅಡಗಿತ್ತು. ಆ ಪದ್ಮದಳಪದ್ಮ ಕ್ಷೋಣಿದಳಪದ್ಮದಲ್ಲಿ ಅಡಗಿತ್ತು. ಆ ಕ್ಷೋಣಿದಳಪದ್ಮ ಕ್ಷಿತಿದಳಪದ್ಮದಲ್ಲಿ ಅಡಗಿತ್ತು. ಆ ಕ್ಷಿತಿದಳಪದ್ಮ ಮಹಾಕ್ಷಿತಿದಳಪದ್ಮದಲ್ಲಿ ಅಡಗಿತ್ತು. ಆ ಮಹಾಕ್ಷಿತಿದಳಪದ್ಮ ಪರಾಪರಕ್ಕೂ ಪರವಾಗಿಹ ಪರಬ್ರಹ್ಮದ ನೆನಹುಮಾತ್ರದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ: ಚತುರ್ದಳಪದ್ಮಶ್ಚೈವ ಷಡ್ದಳೇ ಚ ವಿಲೀಯತೇ | ಷಡ್ದಳಪದ್ಮಕಂ ಚೈವ ದಶದಳೇ ಲಯಂ ತಥಾ || ದಶದಳಪದ್ಮಶ್ಚೈವ ದ್ವಾದಶದಳೇ ಲೀಯತೇ | ದ್ವಾದಶದಳಪದ್ಮಶ್ಚ ಷಷ್ಠಾದಶದಳೇ ಲಯಃ || ಷಷ್ಠಾದಶದಳಂ ಚೈವ ಬ್ರಹ್ಮಪದ್ಮೇ ವಿಲೀಯತೇ | ದ್ವಿದಳೇ ಚ ವಿಲೀಯತೇ ತಥಾ ದ್ವಿದಳಪದ್ಮಶ್ಚ || ಚತುಷಷ್ಠಿರ್ದಳೇ ಲಯಂ ಚೌಷಷ್ಠಿರ್ದಳೇ ಲಯಂ | ಚೌಪಷ್ಠಿದಳಪದ್ಮಂ ಚ ಶತದಳಪದ್ಮೇ ಲಯಂ | ಶತದಳಪದ್ಮಶ್ಚೈವ ಬ್ರಹ್ಮಪದ್ಮೇ ವಿಲೀಯತೇ | ಸಹಸ್ರದಳಪದ್ಮಂ ಚ ತ್ರಿದಳೇ ಚ ವಿಲೀಯತೇ || ತ್ರಿದಳಕಮಲಶ್ಚೈವ ಏಕಪದ್ಮೇ ವಿಲೀಯತೇ ತ್ರಿಸಹಸ್ರಕಮಲೇ ಚ ಏಕಪದ್ಮಶ್ಚ ವಿಲೀಯತೇ || ತ್ರಿಸಹಸ್ರದಳಂ ಪದಂ ಲಕ್ಷದಳೇ ವಿಲೀಯತೇ | ತಥಾ ಲಕ್ಷದಳಂ ಪದ್ಮಂ ಕೋಟಿದಳೇ ವಿಲೀಯತೇ || ಕೋಟಿದಳಮಹಾಪದ್ಮಂ ಆರ್ಬುದದಳೇ ವಿಲೀಯತೇ || ಅರ್ಬುದದಳಪದ್ಮಶ್ಚ ಖರ್ವದಳೇ ಚ ವಿಲೀಯತೇ || ಖರ್ವದಳಪದ್ಮಶ್ಚ ಮಹಾಖರ್ವದಳೇ ಲಯಾಃ | ಮಹಾಖರ್ವದಳಂ ಚೈವ ಪದ್ಮದಳೇ ಚ ಲೀಯತೇ || ತಥಾ ಪದ್ಮದಳಂ ಪದ್ಮಂ ಕ್ಷೋಣಿದಳಪದ್ಮೇ ಲಯಾಃ | ಕ್ಷೋಣಿದಳ ಮಹಾಪದ್ಮಂ ಕ್ಷಿತಿದಳಪದ್ಮೇ ಲಯಾಃ || ಕ್ಷಿತಿದಳ ಮಹಾಪದ್ಮಂ ಮಹಾಕ್ಷಿತಿದಳೇ ಲಯಾಃ | ಮಹಾಕ್ಷಿತಿದಳಂ ಪದ್ಮಂ ಪರಬ್ರಹ್ಮೇ ಲಯಂ ತಥಾ | ಇತಿ ಪದ್ಮಲಯಂ ಜ್ಞಾತುಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.