Index   ವಚನ - 758    Search  
 
ಇನ್ನು ಅಷ್ಟನಾದನಿವೃತ್ತಿಯೆಂತೆಂದಡೆ: ವೀಣಾನಾದದ ಸಹಸ್ರಾಂಶದಲ್ಲಿ ಪೆಣ್ದುಂಬಿನಾದವಡಗಿತ್ತು. ಘಂಟಾನಾದದ ಸಹಸ್ರಾಂಶದಲ್ಲಿ ವೀಣಾನಾದವಡಗಿತ್ತು. ಭೇರೀನಾದದ ಸಹಸ್ರಾಂಶದಲ್ಲಿ ಘಂಟಾನಾದವಡಗಿತ್ತು. ಮೇಘನಾದದ ಸಹಸ್ರಾಂಶದಲ್ಲಿ ಭೇರೀನಾವಡಗಿತ್ತು. ಪ್ರಣವನಾದದ ಸಹಸ್ರಾಂಶದಲ್ಲಿ ಮೇಘನಾದವಡಗಿತ್ತು. ದಿವ್ಯನಾದದ ಸಹಸ್ರಾಂಶದಲ್ಲಿ ಪ್ರಣವನಾದವಡಗಿತ್ತು. ಸಿಂಹನಾದದ ಸಹಸ್ರಾಂಶದಲ್ಲಿ ದಿವ್ಯನಾದವಡಗಿತ್ತು. ಆ ನಿಶ್ಶಬ್ದವೆಂಬ ಪರಬ್ರಹ್ಮವು ಅಡಗಿ ನಿಶ್ಶೂನ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ: ವೀಣಾನಾದಸಹಸ್ರಾಂಶೇ ಭ್ರಮರಂ ಚ ವಿಲೀಯತೇ | ಘಂಟಾನಾದಸಹಸ್ರಾಂಶೇ ವೀಣಾನಾದ ವಿಲೀಯತೇ || ಭೇರೀನಾದ ಸಹಸ್ರಾಂಶೇ ಘಂಟಾನಾದ ವಿಲೀಯತೇ | ಮೇಘನಾದ ಸಹಸ್ರಾಂಶೇ ಭೇರೀನಾದೇ ವಿಲೀಯತೇ | ಪ್ರಣವನಾದ ಸಹಸ್ರಾಂಶೇ ಮೇಘನಾದಂ ಚ ಲೀಯತೇ | ದಿವ್ಯನಾದ ಸಹಸ್ರಾಂಶೇ ಪ್ರಣವಃ ಸವಿಲೀಯತೇ ||'' ಇಂತೆಂದುದಾಗಿ, ಇದಕ್ಕೆ ಶ್ರುತಿ: ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.