Index   ವಚನ - 757    Search  
 
ಇನ್ನು ವಿಂಶತಿಚಕ್ರಂಗಳ ಅಧಿದೇವತೆಗಳ ನಿವೃತ್ತಿ ಅದೆಂತೆಂದಡೆ: ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಾಸ್ವರೂಪದಲ್ಲಿ ಬ್ರಹ್ಮನಡಗಿದನು. ಆ ಪ್ರಣವದ ದಂಡಕಸ್ವರೂಪದಲ್ಲಿ ವಿಷ್ಣುವಡಗಿದನು. ಆ ಪ್ರಣವದ ಕುಂಡಲಾಕಾರದಲ್ಲಿ ರುದ್ರನಡಗಿದನು. ಆ ಪ್ರಣವದ ಅರ್ಧಚಂದ್ರಕದಲ್ಲಿ ಈಶ್ವರನಡಗಿದನು. ಆ ಪ್ರಣವದ ದರ್ಪಣಾಕಾರದಲ್ಲಿ ಸದಾಶಿವನಡಗಿದನು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಆತ್ಮನಡಗಿದನು. ತತ್ವಾತ್ಮ ಸ್ವಯಾತ್ಮನಲ್ಲಿ ಅಡಗಿದನು. ಆ ಸ್ವಯಾತ್ಮನು ಪರಮಾತ್ಮನಲ್ಲಿ ಅಡಗಿದನು. ಆ ಪರಮಾತ್ಮನು ವಿಶ್ವಾತ್ಮನಲ್ಲಿ ಅಡಗಿದನು. ಆ ವಿಶ್ವಾತ್ಮನು ಸರ್ವಾತ್ಮನಲ್ಲಿ ಅಡಗಿದನು. ಆ ಸರ್ವಾತ್ಮನು ನಿರ್ಗುಣಾತ್ಮನಲ್ಲಿ ಅಡಗಿದನು. ಆ ನಿರ್ಗುಣಾತ್ಮನು ನಿಃಕಳಾತ್ಮನಲ್ಲಿ ಅಡಗಿದನು. ಆ ನಿಃಕಳಾತ್ಮನು ಶಿವಾತ್ಮನಲ್ಲಿ ಅಡಗಿದನು. ಆ ಶಿವಾತ್ಮನು ಮಹಾತತ್ವದಲ್ಲಿ ಅಡಗಿದನು. ಆ ಮಹಾತತ್ವವು ನಿರಾಮಯತತ್ವದಲ್ಲಡಗಿತ್ತು. ಆ ನಿರಾಮಯತತ್ವವು ನಿರಾಳತತ್ವದಲ್ಲಿ ಅಡಗಿತ್ತು. ಆ ನಿರಾಳತತ್ವವು ನಿರಂಜನತತ್ವದಲ್ಲಿ ಅಡಗಿತ್ತು. ಆ ನಿರಂಜನತತ್ವವು ಅಚಲಾನಂದತತ್ವದಲ್ಲಿ ಅಡಗಿತ್ತು. ಆ ಅಚಲಾನಂದವು ಅಖಂಡಾತ್ಮನೆಂಬ ಮಹಾತತ್ವದಲ್ಲಿ ಅಡಗಿತ್ತು. ಆ ಅಖಂಡಮಹಾತತ್ವವೆಂಬ ಮಹಾಜ್ಞಾನತತ್ವವು ಪರಬ್ರಹ್ಮವೆಂಬ ಅಖಂಡಮಹಾಜ್ಞಾನತತ್ವದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಅಖಂಡಾಗಮತಂತ್ರೇ: ಓಂಕಾರ ತಾರಕಾರೂಪೇ ಬ್ರಹ್ಮಾಪಿ ವಿಲೀಯತೇ | ಓಂಕಾರ ದಂಡರೂಪೇ ಚ ವಿಷ್ಣುತಂತ್ರಂ ವಿಲೀಯತೇ || ಓಂಕಾರ ಕುಂಡಲಾಕಾರೇ ರುದ್ರಶ್ಚ ಲೀಯತೇ ತಥಾ | ಓಂಕಾರ ಅರ್ಧಚಂದ್ರೇ ಚ ಈಶ್ವರಶ್ಚ ಲಯಂ ತಥಾ || ಓಂಕಾರ ದರ್ಪಣಾಕಾರೇ ಸದಾಶಿವಂ ಚ ಲೀಯತೇ | ಓಂಕಾರ ಜ್ಯೋತಿರೂಪೇ ಚ ಆತ್ಮತತ್ವಂ ವಿಲೀಯತೇ || ತಥಾ ತತ್ವಾತ್ಮಕಶ್ಚೈವ ಸ್ವಯಾತ್ಮನಿ ವಿಲೀಯತೇ | ಪರಮಾತ್ಮಾ ಸ್ವಯಂ ಲೀಯಂ ವಿಶ್ವಾತ್ಮನಿ ಲಯಂ ಪರಃ || ತಥಾ ವಿಶ್ವಾತ್ಮಕಂ ಚೈವ ಸರ್ವಾತ್ಮನಿ ವಿಲೀಯತೇ | ತಥಾ ಸರ್ವಾತ್ಮಕಂ ಚೈವ ನಿರ್ಗುಣಾತ್ಮನಿ ಲೀಯತೇ | ನಿರ್ಗುಣಾತ್ಮಕತತ್ವಂ ಚ ನಿಃಕಳಾತ್ಮನಿ ಲೀಯತೇ | ಶಿವಾತ್ಮನಿ ಲೀಯತೇ ನಿಃಕಳೇ ಲೀಯತೇ || ಮಹಾತ್ಮೇ ಲೀಯತೇ ಶಿವಃ | ತಥಾ ಮಹಾತತ್ವಂ ಚ ನಿರಾಲಂಬೇ ವಿಲೀಯತೇ | ನಿರಾಮಯಾತ್ಮಕಂ ಚೈವ ನಿರಾಳಾತ್ಮೇ ವಿಲೀಯತೇ | ತಥಾ ನಿರಾಳತತ್ವಂ ಚ ನಿರಂಜನಾತ್ಮನಿ ಲೀಯತೇ | ಇತ್ಯಾತ್ಮನೋ ಲಯಂ ಜ್ಞಾತುಂ ದುರ್ಲಭಂ ಕಮಲೋದ್ಭವ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.