Index   ವಚನ - 760    Search  
 
ಇನ್ನು ಷಡ್ವಿಧದ್ರವ್ಯಂಗಳ ನಿವೃತ್ತಿ ಅದೆಂತೆಂದಡೆ: ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪದಲ್ಲಿ ಗಂಧವಡಗಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ರಸವಡಗಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ರೂಪವಡಗಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಸ್ಪರ್ಶನವಡಗಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದವಡಗಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ತೃಪ್ತಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಓಂಕಾರ ತಾರಕಾರೂಪೇ ಗಂಧಶ್ಚ ವಿಲೀಯತೇ | ಓಂಕಾರ ದಂಡರೂಪೇ ಚ ರಸಶ್ಚೈವಾ ವಿಲೀಯತೇ ಓಂಕಾರ ಕುಂಡಲಾಕಾರೇ ರೂಪಶ್ಚೈವಾ ವಿಲೀಯತೇ || ಓಂಕಾರ ಅರ್ಧಚಂದ್ರೇ ಚ ಸ್ಪರ್ಶನಂ ಲೀಯತೇ ತಥಾ || ಓಂಕಾರ ದರ್ಪಣಾಕಾರೇ ಶಬ್ದಶ್ಚಾಪಿ ವಿಲೀಯತೇ | ಓಂಕಾರ ಜ್ಯೋತಿರೂಪೇ ಚ ತೃಪ್ತಿಶ್ಚೈವ ವಿಲೀಯತೇ | ಇತಿ ಷಡ್ಗುಣದ್ರವ್ಯಂ ಸ್ಥಾನ ಸ್ಥಾನೇ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.