ಇನ್ನು ಋಗ್ವೇದ ಯಜುರ್ವೇದ ಸಾಮವೇದ
ಅಥರ್ವಣವೇದ ಅಜಪೆ ಗಾಯತ್ರಿಯ ನಿವೃತ್ತಿ ಅದೆಂತೆಂದಡೆ:
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ತಾರಕಸ್ವರೂಪದಲ್ಲಿ ಋಗ್ವೇದವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಯಜುರ್ವೇದವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಸಾಮವೇದವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಅಥರ್ವಣವೇದವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಗಾಯತ್ರಿಯಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಅಜಪೆಯಡಗಿತ್ತು ನೋಡಾ.
ಇದಕ್ಕೆ ಚಿತ್ಪಿಂಡಾಗಮೇ:
ಓಂಕಾರ ತಾರಕಾರೂಪೇ ಋಗ್ವೇದಶ್ಚ ವಿಲೀಯತೇ |
ಓಂಕಾರ ದಂಡರೂಪೇ ಚ ಯಜುರ್ವೇದಂ ಚ ಲೀಯತೇ |
ಓಂಕಾರ ಕುಂಡಲಾಕಾರೇ ಸಾಮವೇದಂ ಚ ಲೀಯತೇ |
ಓಂಕಾರ ಅರ್ಧಚಂದ್ರೇ ಚ ಅರ್ಥ ಶ್ರುತಿಲಯಂ ತಥಾ |
ಓಂಕಾರ ದರ್ಪಣಾಕಾರೇ ಗಾಯಾತ್ರೀ ಚ ವಿಲೀಯತೇ |
ಓಂಕಾರ ಜ್ಯೋತಿಸ್ವರೂಪೇ ಅಜಪೇಶ್ಚ ವಿಲೀಯತೆ |
ಇತಿ ವೇದಲಯಂ ಜ್ಞಾತುಂ ದುರ್ಲಭಂ ಕಮಲೋದ್ಭವಾ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu r̥gvēda yajurvēda sāmavēda
atharvaṇavēda ajape gāyatriya nivr̥tti adentendaḍe:
Akhaṇḍa jyōtirmayavāgiha gōḷakākārapraṇavada
tārakasvarūpadalli r̥gvēdavaḍagittu.
Ā praṇavada daṇḍakasvarūpadalli yajurvēdavaḍagittu.
Ā praṇavada kuṇḍalākāradalli sāmavēdavaḍagittu.
Ā praṇavada ardhacandrakadalli atharvaṇavēdavaḍagittu.
Ā praṇavada darpaṇākāradalli gāyatriyaḍagittu.
Ā praṇavada jyōtisvarūpadalli ajapeyaḍagittu nōḍā.
Idakke citpiṇḍāgamē:
Ōṅkāra tārakārūpē r̥gvēdaśca vilīyatē |
ōṅkāra daṇḍarūpē ca yajurvēdaṁ ca līyatē |
ōṅkāra kuṇḍalākārē sāmavēdaṁ ca līyatē |
ōṅkāra ardhacandrē ca artha śrutilayaṁ tathā |
ōṅkāra darpaṇākārē gāyātrī ca vilīyatē |
ōṅkāra jyōtisvarūpē ajapēśca vilīyate |
iti vēdalayaṁ jñātuṁ durlabhaṁ kamalōdbhavā ||''
intendudāgi,
apramāṇakūḍalasaṅgamadēvā.