Index   ವಚನ - 761    Search  
 
ಇನ್ನು ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣವೇದ ಅಜಪೆ ಗಾಯತ್ರಿಯ ನಿವೃತ್ತಿ ಅದೆಂತೆಂದಡೆ: ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪದಲ್ಲಿ ಋಗ್ವೇದವಡಗಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಯಜುರ್ವೇದವಡಗಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ಸಾಮವೇದವಡಗಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಅಥರ್ವಣವೇದವಡಗಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಗಾಯತ್ರಿಯಡಗಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಅಜಪೆಯಡಗಿತ್ತು ನೋಡಾ. ಇದಕ್ಕೆ ಚಿತ್ಪಿಂಡಾಗಮೇ: ಓಂಕಾರ ತಾರಕಾರೂಪೇ ಋಗ್ವೇದಶ್ಚ ವಿಲೀಯತೇ | ಓಂಕಾರ ದಂಡರೂಪೇ ಚ ಯಜುರ್ವೇದಂ ಚ ಲೀಯತೇ | ಓಂಕಾರ ಕುಂಡಲಾಕಾರೇ ಸಾಮವೇದಂ ಚ ಲೀಯತೇ | ಓಂಕಾರ ಅರ್ಧಚಂದ್ರೇ ಚ ಅರ್ಥ ಶ್ರುತಿಲಯಂ ತಥಾ | ಓಂಕಾರ ದರ್ಪಣಾಕಾರೇ ಗಾಯಾತ್ರೀ ಚ ವಿಲೀಯತೇ | ಓಂಕಾರ ಜ್ಯೋತಿಸ್ವರೂಪೇ ಅಜಪೇಶ್ಚ ವಿಲೀಯತೆ | ಇತಿ ವೇದಲಯಂ ಜ್ಞಾತುಂ ದುರ್ಲಭಂ ಕಮಲೋದ್ಭವಾ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.