Index   ವಚನ - 762    Search  
 
ದ್ವಿದಶಚಕ್ರ ಮೊದಲಾಗಿ ಚತುರ್ವೇದ ಅಜಪೆ ಗಾಯತ್ರಿ ಕಡೆಯಾಗಿ ಸಮಸ್ತವನೊಳಕೊಂಡು ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹ ಅನಂತವ ಅಖಂಡಗರ್ಭದಲ್ಲಿ ಅಡಗಿಸಿಕೊಂಡು, ಆದಿಮಧ್ಯಾವಸಾನಂಗಳಿಲ್ಲದೆ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವವಾಗಿದ್ದುದು ನೋಡಾ ಇದಕ್ಕೆ ಮಹಾಗಮೇ: ಆದಿಮಧ್ಯಾಂತಶೂನ್ಯಂ ಚ ಶೂನ್ಯ ಶೂನ್ಯಂ ದಶೋದಶ | ಸರ್ವಶೂನ್ಯಂ ನಿರಾಕಾರಂ ನಿರ್ದ್ವಂದ್ವಂ ಪರಮಂ ಪದಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.