ಭಕಾರವೇ ಜ್ಞಾನಸ್ವರೂಪ
ತಕಾರವೇ ತತ್ವಸ್ವರೂಪ
ತತ್ವಜ್ಞಾನಸ್ವರೂಪವ ಬಲ್ಲಾತನೆ ಭಕ್ತನು;
ಆತನೆ ಪರಶಿವಮೂರ್ತಿ.
ತತ್ವಜ್ಞಾನಸ್ವರೂಪನರಿಯದೆ ಭಕ್ತರೆಂಬರು,
ಅವರಿಗೆ ಭಕ್ತಸ್ಥಲವಿಲ್ಲ ನೋಡಾ.
ಭಕ್ತಸ್ಥಲವಿಲ್ಲದವರಿಗೆ ಲಿಂಗಸ್ಥಲವಿಲ್ಲ.
ಭಕ್ತ-ಲಿಂಗಸ್ಥಲವಿಲ್ಲದವರಿಗೆ ಮೋಕ್ಷವಿಲ್ಲ ನೋಡಾ.
ಇದಕ್ಕೆ ಈಶ್ವರೋsವಾಚ:
ಭಕಾರಂ ಜ್ಞಾನರೂಪಂ ಚ ತಕಾರಂ ತತ್ವರೂಪಕಂ |
ತತ್ವಜ್ಞಾನದ್ವಯಜ್ಞಾನಂ ಶಿವಭಕ್ತೋ ಮಹೇಶ್ವರಿ |
ನಾಮಧಾರಕ ಭಕ್ತಾನಾಂ ನಾಮಧಾರಕಲಿಂಗಯೋ |
ಭಕ್ತಲಿಂಗ ದ್ವಯಂ ನಾಸ್ತಿ ನಾಸ್ತಿ ಮೋಕ್ಷಂ ವರಾನನೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Bhakāravē jñānasvarūpa
takāravē tatvasvarūpa
tatvajñānasvarūpava ballātane bhaktanu;
ātane paraśivamūrti.
Tatvajñānasvarūpanariyade bhaktarembaru,
avarige bhaktasthalavilla nōḍā.
Bhaktasthalavilladavarige liṅgasthalavilla.
Bhakta-liṅgasthalavilladavarige mōkṣavilla nōḍā.
Idakke īśvarōsvāca:
Bhakāraṁ jñānarūpaṁ ca takāraṁ tatvarūpakaṁ |
tatvajñānadvayajñānaṁ śivabhaktō mahēśvari |
nāmadhāraka bhaktānāṁ nāmadhārakaliṅgayō |
bhaktaliṅga dvayaṁ nāsti nāsti mōkṣaṁ varānanē ||''
intendudāgi,
apramāṇakūḍalasaṅgamadēvā.