ಇನ್ನು ಭಕ್ತನ ತಾಮಸನಿರಸನವದೆಂತೆಂದಡೆ:
ಭಕಾರವೇ ಮಹಾಜ್ಞಾನ, ತಕಾರವೇ ತತ್ವಜ್ಞಾನ ನೋಡಾ.
ಭಕಾರ ತಾರಕಾಸ್ವರೂಪ ಸ್ವಭಾವಗಳನರಿದಾತನೆ ಭಕ್ತನು.
ಭಕಾರ ತಾರಕಾಸ್ವರೂಪ ಸ್ವಭಾವಂಗಳನರಿಯದೆ
ಭಕ್ತರೆಂಬ ವೇಷಡಂಭಕ ರೌರವನರಕಿಗಳನೇನೆಂಬೆನಯ್ಯಾ.
ಇದಕ್ಕೆ ವೀರಾಗಮೇ:
ಭಕಾರಂತು ಮಹಾಜ್ಞಾನಂ ತಕಾರಂ ತತ್ವರೂಪಕಂ |
ತತ್ವಜ್ಞಾನದಯಂ ಚೈವ ಭಕ್ತಶ್ರದ್ಧಾಭಿಧೀಯತೇ ||
ಭಕಾರಂ ಭವದೂರಂ ಚ ತಕಾರಂ ತನುನಾಶನಂ |
ಭಕ್ತಾಕ್ಷರ ದ್ವಯಂ ನಾಸ್ತಿ ತದ್ಭಕ್ತೋ ನರಕಂ ವ್ರಜೇತ್ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu bhaktana tāmasanirasanavadentendaḍe:
Bhakāravē mahājñāna, takāravē tatvajñāna nōḍā.
Bhakāra tārakāsvarūpa svabhāvagaḷanaridātane bhaktanu.
Bhakāra tārakāsvarūpa svabhāvaṅgaḷanariyade
bhaktaremba vēṣaḍambhaka rauravanarakigaḷanēnembenayyā.
Idakke vīrāgamē:
Bhakārantu mahājñānaṁ takāraṁ tatvarūpakaṁ |
tatvajñānadayaṁ caiva bhaktaśrad'dhābhidhīyatē ||
bhakāraṁ bhavadūraṁ ca takāraṁ tanunāśanaṁ |
bhaktākṣara dvayaṁ nāsti tadbhaktō narakaṁ vrajēt ||''
intendudāgi,
apramāṇakūḍalasaṅgamadēvā.