Index   ವಚನ - 766    Search  
 
ಇನ್ನು ಗುರುತಾಮಸ ನಿರಸನವದೆಂತೆಂದಡೆ: ಗುಕಾರವೆ ಅಂಧಃಕಾರವೆಂಬ ಅಜ್ಞಾನವ ಕೆಡಿಸುವ ಜ್ಯೋತಿಸ್ವರೂಪ ನೋಡಾ. ರುಕಾರವೇ ರೂಪಾತೀತವಾಗಿಹ ಪರಬ್ರಹ್ಮ ನೋಡಾ. ಇದಕ್ಕೆ ಉತ್ತರವೀರಾಗಮೇ: ಗುಕಾರವಸ್ತಂಧಕಾರಸ್ತು ರೂಪಾತೀತಂ ರುಕಾರಕಂ | ಗುಣರೂಪ ವಿಹೀನತ್ವಾತ್ ಗುರುರಿತ್ಯಾಭಿಧೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.