Index   ವಚನ - 767    Search  
 
ಗುಕಾರವೇ ನಿರ್ಗುಣಾತ್ಮನು, ರುಕಾರವೇ ಪರಮಾತ್ಮನು. ಗುಕಾರವೇ ಶಿವ, ರುಕಾರವೇ ಶಿವಾತ್ಮನು. ಈ ಉಭಯ ಸಂಗವೇ ಗುರುರೂಪ ನೋಡಾ. ಇದಕ್ಕೆ ಈಶ್ವರೋsವಾಚ: ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಕಾರಂ ಮಮ ರೂಪಂ ಚ ರುಕಾರಂ ತನುರೂಪಕಂ | ಉಭಯೋಃ ಸಂಗಮೇದೇವ ಗುರುರೂಪೋ ಮಹೇಶ್ವರಿ ||'' ಇಂತೆಂದುದಾಗಿ, ಇದಕ್ಕೆ ವೀರಾಗಮೇ: ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪಮತೀತಂ ಚ ಯೋತ್ಸದದ್ಯಾತ್ಸ ಗುರುಸ್ಮೃತಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ: ಯೋ ಗುರುಃ ಸ ಶಿವಃ ಪ್ರೋಕ್ತಃ ಯೋ ಶಿವಸ್ಸಗುರುಸ್ಮೃತಃ | ಭುಕ್ತಿ ಮುಕ್ತಿ ಪ್ರದಾತಾ ಚ ಮಮ ರೂಪೋ ಮಹೇಶ್ವರಿ ||'' ಇಂತೆಂದುದಾಗಿ, ಇಂಥ ಮಹಾಮಹಿಮನೆ ಗುರುವಲ್ಲದೆ ಮಿಕ್ಕಿನ ನಾಮಧಾರಕ ಗುರುಗಳೆಲ್ಲ ಗುರುವಲ್ಲ; ಆ ಗುರುವಿನ ಬೆಂಬಳಿಯವರೆಲ್ಲ ಶಿಷ್ಯರಲ್ಲ. ಆ ಗುರುಶಿಷ್ಯರಿಬ್ಬರಿಗೂ ಕುಂಭೀಪಾತಕವೆಂದುದು ನೋಡಾ. ಇದಕ್ಕೆ ಉತ್ತರವೀರಾಗಮೇ: ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಃ ಸದಾ | ಅಂಧಕಾಂಧಕರಾಯುಕ್ತಂ ದ್ವಿವಿಧಂ ಪಾತಕಂ ಭವೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.