ಗುಕಾರವೇ ನಿರ್ಗುಣಾತ್ಮನು, ರುಕಾರವೇ ಪರಮಾತ್ಮನು.
ಗುಕಾರವೇ ಶಿವ, ರುಕಾರವೇ ಶಿವಾತ್ಮನು.
ಈ ಉಭಯ ಸಂಗವೇ ಗುರುರೂಪ ನೋಡಾ.
ಇದಕ್ಕೆ ಈಶ್ವರೋsವಾಚ:
ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ |
ಗುಕಾರಂ ಮಮ ರೂಪಂ ಚ ರುಕಾರಂ ತನುರೂಪಕಂ |
ಉಭಯೋಃ ಸಂಗಮೇದೇವ ಗುರುರೂಪೋ ಮಹೇಶ್ವರಿ ||''
ಇಂತೆಂದುದಾಗಿ,
ಇದಕ್ಕೆ ವೀರಾಗಮೇ:
ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ |
ಗುಣರೂಪಮತೀತಂ ಚ ಯೋತ್ಸದದ್ಯಾತ್ಸ ಗುರುಸ್ಮೃತಃ ||''
ಇಂತೆಂದುದಾಗಿ,
ಇದಕ್ಕೆ ಈಶ್ವರೋsವಾಚ:
ಯೋ ಗುರುಃ ಸ ಶಿವಃ ಪ್ರೋಕ್ತಃ ಯೋ ಶಿವಸ್ಸಗುರುಸ್ಮೃತಃ |
ಭುಕ್ತಿ ಮುಕ್ತಿ ಪ್ರದಾತಾ ಚ ಮಮ ರೂಪೋ ಮಹೇಶ್ವರಿ ||''
ಇಂತೆಂದುದಾಗಿ,
ಇಂಥ ಮಹಾಮಹಿಮನೆ ಗುರುವಲ್ಲದೆ
ಮಿಕ್ಕಿನ ನಾಮಧಾರಕ ಗುರುಗಳೆಲ್ಲ ಗುರುವಲ್ಲ;
ಆ ಗುರುವಿನ ಬೆಂಬಳಿಯವರೆಲ್ಲ ಶಿಷ್ಯರಲ್ಲ.
ಆ ಗುರುಶಿಷ್ಯರಿಬ್ಬರಿಗೂ ಕುಂಭೀಪಾತಕವೆಂದುದು ನೋಡಾ.
ಇದಕ್ಕೆ ಉತ್ತರವೀರಾಗಮೇ:
ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಃ ಸದಾ |
ಅಂಧಕಾಂಧಕರಾಯುಕ್ತಂ ದ್ವಿವಿಧಂ ಪಾತಕಂ ಭವೇತ್ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Gukāravē nirguṇātmanu, rukāravē paramātmanu.
Gukāravē śiva, rukāravē śivātmanu.
Ī ubhaya saṅgavē gururūpa nōḍā.
Idakke īśvarōsvāca:
Gukāraṁ ca guṇātītaṁ rukāraṁ rūpavarjitaṁ |
gukāraṁ mama rūpaṁ ca rukāraṁ tanurūpakaṁ |
ubhayōḥ saṅgamēdēva gururūpō mahēśvari ||''
intendudāgi,
idakke vīrāgamē:
Gukāraṁ ca guṇātītaṁ rukāraṁ rūpavarjitaṁ |
guṇarūpamatītaṁ ca yōtsadadyātsa gurusmr̥taḥ ||''
intendudāgi,
idakke īśvarōsvāca:
Yō guruḥ sa śivaḥ prōktaḥ yō śivas'sagurusmr̥taḥ |
bhukti mukti pradātā ca mama rūpō mahēśvari ||''
intendudāgi,
intha mahāmahimane guruvallade
mikkina nāmadhāraka gurugaḷella guruvalla;
Ā guruvina bembaḷiyavarella śiṣyaralla.
Ā guruśiṣyaribbarigū kumbhīpātakavendudu nōḍā.
Idakke uttaravīrāgamē:
Nāmadhārakaśiṣyānāṁ nāmadhārī guruḥ sadā |
andhakāndhakarāyuktaṁ dvividhaṁ pātakaṁ bhavēt ||''
intendudāgi,
apramāṇakūḍalasaṅgamadēvā.