ಇನ್ನು ಗುರುತಾಮಸ ನಿರಸನವದೆಂತೆಂದಡೆ:
ಗುಕಾರವೆ ಅಂಧಃಕಾರವೆಂಬ ಅಜ್ಞಾನವ ಕೆಡಿಸುವ
ಜ್ಯೋತಿಸ್ವರೂಪ ನೋಡಾ.
ರುಕಾರವೇ ರೂಪಾತೀತವಾಗಿಹ ಪರಬ್ರಹ್ಮ ನೋಡಾ.
ಇದಕ್ಕೆ ಉತ್ತರವೀರಾಗಮೇ:
ಗುಕಾರವಸ್ತಂಧಕಾರಸ್ತು ರೂಪಾತೀತಂ ರುಕಾರಕಂ |
ಗುಣರೂಪ ವಿಹೀನತ್ವಾತ್ ಗುರುರಿತ್ಯಾಭಿಧೀಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu gurutāmasa nirasanavadentendaḍe:
Gukārave andhaḥkāravemba ajñānava keḍisuva
jyōtisvarūpa nōḍā.
Rukāravē rūpātītavāgiha parabrahma nōḍā.
Idakke uttaravīrāgamē:
Gukāravastandhakārastu rūpātītaṁ rukārakaṁ |
guṇarūpa vihīnatvāt gururityābhidhīyatē ||''
intendudāgi,
apramāṇakūḍalasaṅgamadēvā.