Index   ವಚನ - 770    Search  
 
ಇನ್ನು ಜಂಗಮದ ತಾಮಸನಿರಸನವದೆಂತೆಂದಡೆ: ವ್ಯೋಮಾಕಾಶವೇ ಶರೀರ, ಆಕಾಶವೇ ಮುಖ, ಚಂದ್ರಾರ್ಕವಹ್ನಿಯೇ ನೇತ್ರಂಗಳು ನೋಡಾ. ಮಹಾಮೇರು ಪರ್ವತವೇ ಲಿಂಗ, ಬ್ರಹ್ಮಾಂಡವೇ ಮಕುಟ, ಪಾತಾಳವೇ ಪಾದದ್ವಯಂಗಳು ನೋಡಾ. ದಶದಿಕ್ಕುಗಳೇ ಬಾಹು, ಮೇಘಂಗಳೇ ಜಟಾಮಯ, ಚಂದ್ರಜ್ಯೋತಿಯೇ ವಿಭೂತಿ, ವೇದಂಗಳೆ ಸರ್ವಕ್ರಿಯಾಮಯ ನೋಡಾ. ನಕ್ಷತ್ರಂಗಳೇ ಪುಷ್ಪ, ಸಪ್ತಕುಲಪರ್ವತಂಗಳೇ ರುದ್ರಾಕ್ಷಿ, ಸಪ್ತಸಮುದ್ರಂಗಳೇ ಜಲಪಾತಂಗಳು ನೋಡಾ. ಜಗ ಸೃಷ್ಟಿಮಯವೇ ಕಂಠ, ಪೃಥ್ವಿಯೇ ಆಸನ, ಅಹೋ ರಾತ್ರಿಯೇ ಮಠ ನೋಡಾ. ತ್ರಿಕಾಲಜ್ಞಾನವೇ ಸೌಭಾಗ್ಯ, ಷಡುಸ್ಥಲಬ್ರಹ್ಮವೇ ಅರಿವು, ಮಹಾಶೇಷನೆ ಕಟಿಸೂತ್ರ, ಮಹಾಜ್ಞಾನಸಮುದ್ರವೇ ವಾಙ್ಮಯ ನೋಡಾ. ಮಹಾಮೇರುವೇ ದಂಡಕೋಲು, ಸದ್ಗುಣವೇ ಪಾತ್ರ, ಕುಲ ಶಿವಕುಲ ನೋಡಾ. ವನಸ್ಪತಿಯೇ ರೋಮಂಗಳು, ಮಕುಟದಲಿ ಶೂನ್ಯಲಿಂಗ, ಚಿದಾಭಾಸ ಚಿದಂಬರ ನೋಡಾ. ಇಂಥ ಮಹಾಮಹಿಮ ಜಂಗಮ ಚತುರ್ದಶಭುಜವನೊಳಕೊಂಡು, ಬ್ರಹ್ಮಾಂಡವೇ ಮಕುಟ, ಪಾತಾಳವೇ ಪಾದದ್ವಯವಾಗಿ ಸುಳಿದನು ನೋಡಾ. ಇದಕ್ಕೆ ವೀರಾಗಮೇ: ಪಾದಮಪ್ಯತಳಂ ವಿದ್ಯಾತ್ ಪಾದೋರ್ಧ್ವಂ ವಿತಳಂ ತಥಾ | ಜಂಗಾಭ್ಯಾಂ ಸುತಳಂ ಜ್ಞೇಯಂ ದ್ವಿತಳಂ ಜಾನುಸಂಸ್ಥಿತಂ | ತಳಾತಳಂ ತಥೋರೂಭ್ಯಾಂ ಗುಹ್ಯಸ್ಥಾನೇ ರಸಾತಳಂ | ಪಾತಾಳೇ ಕಟಿಮಧ್ಯಸ್ತು ಇತ್ಯೇತೇ ಸಪ್ತಲೋಕಕಂ || ಭೂಲೋಕಂ ನಾಭಿಮಧ್ಯಂ ಚ ಭುವರ್ಲೋಕೇ ಹೃದಿ ಸ್ಥಿತಂ | ಊರುಚಯಃ ಸ್ವರ್ಗಲೋಕೇ ಮಹರ್ಲೋಕಂತು ಕಂಠಜಂ | ಜನರ್ಲೋಕಂ ಕಂಠಮಧ್ಯೇ ತಪರ್ಲೋಕೇ ಲಲಾಟಕೇ | ಸತ್ಯಲೋಕೇ ಮಸ್ತಕಸ್ಥಂ ಭುವನಾನಿ ಚತುರ್ದಶ || ಶರೀರಂ ವ್ಯೋಮಾಕಾಶಂ ಪಾತಾಳಂ ಚ ಪದದ್ವಯಂ | ಚಂದ್ರಾರ್ಕನೇತ್ರಯುಗಳಂ ಮೇರುಲಿಂಗಂ ಕರಸ್ಥಲಂ | ತಸ್ಯ ದೇಹೇ ಸಮಸ್ತಾನಿ ಭುವನಾನಿ ಚತುರ್ದಶ || ಬ್ರಹ್ಮಾಂಡೇ ಮಕುಟಂ ತಸ್ಯ ವದನಂ ಗಗನಂ ಶಿವೇ | ದಿಶಶ್ಚ ಸರ್ವಬಾಹುಶ್ಚ ಮೇಘಂ ಸರ್ವಜಟಾಮಯಂ | ಚಂದ್ರ ಜ್ಯೋತಿರ್ವಿಭೂತಿಶ್ಚ ವೇದಃ ಸರ್ವಂ ಕ್ರಿಯಾಮಯಂ | ನಕ್ಷತ್ರಂ ಪುಷ್ಪನಿಚಯಂ ರುದ್ರಾಕ್ಷಂ ಕುಲಪರ್ವತಂ | ಸಾಗರಂ ಜಲಪಾತ್ರಂ ಚ ವಾಙ್ಮಯಂ ಸೃಷ್ಟಿಮಯಂ ಜಗತ್ | ಆಸನಂ ಪೃಥ್ವೀ ಮಾತ್ರಸ್ಯ ಅಹೋರಾತ್ರಂ ಗೃಹಾಮಠಂ | ತ್ರಿಕಾಲಂ ಜ್ಞಾನ ಸೌಭಾಗ್ಯಂ ಮತಿವಾನ್ ಷಟ್‌ಸ್ಥಲ ಪ್ರಿಯೆ | ಶೇಷಾಪಿ ಕಟಿಸೂತ್ರಂ ಚ ಜ್ಞಾನಮುದ್ರಾ ಚ ವಾಙ್ಮಯಂ | ಮೇರುದಂಡ ಗುಣಂ ಪಾತ್ರಂ ಕುಲಂ ಶಿವಕುಲಂ ಭವೇತ್ | ವನಸ್ಪತಿಶ್ಚ ರೋಮಾನಿ ಏವಮೇಕಾನಿ ಪಾರ್ವತೀ | ಮಕುಟಂ ಶೂನ್ಯ ಸಂಜಾತಂ ಚಿದಾಭಾಸಂ ಚಿದಂಬರೇ || ಜಕಾರಂ ಹಂಸವಾಹಸ್ಯಾ ಗಕಾರಂ ಗರುಡಧ್ವಜಂ | ಮಕಾರಂ ರುದ್ರ ರೂಪಂ ಚ ತ್ರಿಮೂರ್ತ್ಯಾತ್ಮಜಂಗಮಂ || ಜಕಾರೇ ಜನನಂ ಪೃಥ್ವೀ ಗಕಾರೇ ಆಕಾಶೋದ್ಭವಂ | ಮಕಾರೇ ಮರ್ತ್ಯಲೋಕಂ ಚ ಜಂಗಮಂ ಜಗದೀಶ್ವರಂ | ಜಂಗಮಸ್ಯ ತ್ರಿಯಕ್ಷರಂ ಭುವನಾನಿ ಚತುರ್ದಶಂ | ಸ್ವರ್ಗ ಮರ್ತ್ಯಂ ಚ ಪಾತಾಳಂ ಜಂಗಮಾನಾಂ ಪ್ರಸಶ್ಯತೇ ||'' ಎಂದುದಾಗಿ, ಇಂಥ ಮಹಾಮಹಿಮೆಯನುಳ್ಳ ಮಹಾಜಂಗಮವೆ ಜಂಗಮವಲ್ಲದೆ ಸಚರಾಚರ ಚತುರ್ವಳಯದೊಳಗೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧದಾಸೆಗೆ ಸುಳಿವ ವೇಷಧಾರಿಯನೆನಗೊಮ್ಮೆ ತೋರದಿರಯ್ಯ. ಇದಕ್ಕೆ ವೀರಾಗಮೇ: ಆಶಯಾಬಧ್ಯತೇ ಲೋಕಃ ಕರ್ಮಣಾ ಬಹುಚಿಂತಯಾ | ಆಯುಕ್ಷಯಂ ನ ಜಾನಾತಿ ವೇಣು ಸೂತ್ರಂ ವಿಧೀಯತೇ ||'' ಇಂತೆಂದುದಾಗಿ, ಆಸೆಯ ಧಿಕ್ಕರಿಸಿ ನಿರಾಸೆಯನಿಂಬುಗೊಂಡ ಮಹಾಜಂಗಮವನೀಪರಿ ಎಂಬೆನಯ್ಯಾ, ಅಪ್ರಮಾಣಕೂಡಲಸಂಗಮದೇವಾ.