Index   ವಚನ - 771    Search  
 
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ಉಳ್ಳವರ ಮನೆಯ ಬಾಗಿಲಕಾಯ್ದು, ಅವರಾಳಾಗಿ ಮೋಕ್ಷವನೆಯ್ದಲರಿಯದೆ ಸಾವ ವೇಷಧಾರಿಗಳ ಜಂಗಮವಲ್ಲವೆಂದುದು ನೋಡಾ. ಇದಕ್ಕೆ ವೀರಾಗಮೇ: ಆಯುರ್ವೃದ್ಧಾಃ ತಪೋವೃದ್ಧಾಃ ವೇದವೃದ್ಧಾಃ ಬಹುಶ್ರುತಾಃ | ಸರ್ವಸಾಧನವೃದ್ಧಾಪಿ ದ್ವಾರೇ ತಿಷ್ಠತಿ ಕಿಂಕರಾಃ ||'' ಇಂತೆಂದುದಾಗಿ, ಆಸೆಯ ಧಿಕ್ಕರಿಸಿದ ನಿಶ್ಚಿಂತ ನಿರಾಭರಿತ ಮಹಾಜಂಗಮಕ್ಕೆ ನಮೋ ನಮೋ ಎಂಬೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ