ಜಟೆಯಾಗಲಿ, ಮುಡಿಯಾಗಲಿ, ಶಿಖಿಯಾಗಲಿ,
ಪಂಚಮುದ್ರೆ ಪರಿಪೂರ್ಣವಾಗಿಹ ಜಂಗಮವಾಗಲಿ,
ಪ್ರಮಾದವಶದಿಂದ ಮೈಥುನವ ಮಾಡಿದನಾದಡೆ
ಅವರ ಶಿವದ್ರೋಹಿಗಳೆಂದುದು ನೋಡಾ.
ಇದಕ್ಕೆ ಶಿವಾಗಮೇ:
ಜಟೀ ಮುಂಡೀ ಶಿಖೀ ವಾಪಿ ಮುದ್ರಾಪಂಚಕ ಭೂಷಿತಂ |
ಪ್ರಮಾದೇ ಮೈಥುನಂ ಕುರ್ಯಾತ್ ಶಿವದ್ರೋಹೀ ನ ಸಂಶಯಃ ||''
ಇಂತೆಂದುದಾಗಿ,
ಇದಕ್ಕೆ ವೀರಾಗಮೇ:
ಜಗನ್ಮೋಹಿತ ಮರ್ಮಾನಾಂ ಮೋಹಿತಾನಾಮೇತಿ ಈಶ್ವರಃ |
ಯೋಗಿದ್ವಾರೇ ಚ ಕ್ರಿಯಾಮೇತಿ ಸ ಚಾಪಿ ನರಕಂ ವ್ರಜೇತ್ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Jaṭeyāgali, muḍiyāgali, śikhiyāgali,
pan̄camudre paripūrṇavāgiha jaṅgamavāgali,
pramādavaśadinda maithunava māḍidanādaḍe
avara śivadrōhigaḷendudu nōḍā.
Idakke śivāgamē:
Jaṭī muṇḍī śikhī vāpi mudrāpan̄caka bhūṣitaṁ |
pramādē maithunaṁ kuryāt śivadrōhī na sanśayaḥ ||''
Intendudāgi,
idakke vīrāgamē:
Jaganmōhita marmānāṁ mōhitānāmēti īśvaraḥ |
yōgidvārē ca kriyāmēti sa cāpi narakaṁ vrajēt ||''
intendudāgi,
apramāṇakūḍalasaṅgamadēvā.