ಗುರುಲಿಂಗಜಂಗಮವೆಂದು ಸುಳಿವ ಅಣ್ಣಗಳು ನೀವು ಕೇಳಿರೆ:
ದಾಸಿಯ ಸಂಗವುಳ್ಳನ್ನಕ್ಕ ಗುರುವಲ್ಲ,
ವೇಶಿಯಸಂಗವುಳ್ಳನ್ನಕ್ಕ ಲಿಂಗವಲ್ಲ,
ಪರಸ್ತ್ರೀಯ ಸಂಗವುಳ್ಳನ್ನಕ್ಕ ಜಂಗಮವಲ್ಲ.
ಈ ತ್ರಿವಿಧಸಂಗವುಳ್ಳನ್ನಕ್ಕ ಗುರುಲಿಂಗಜಂಗಮವೆಂದು ಸುಳಿದರೆ
ಇಪ್ಪತ್ತೆಂಟುಕೋಟಿ ನರಕ ತಪ್ಪದು ನೋಡಾ.
ಇದಕ್ಕೆ ವೀರಾಗಮೇ:
ದಾಸಿವೇಶಿಪರಸ್ತ್ರೀಣಾಂ ತ್ರಿವಿಧ ಸಂಗಯೋಗಾಯಃ |
ಅಷ್ಟವಿಂಶತಿ ಕೋಟ್ಯಸ್ತು ನರಕೇ ಕಾಲಮಕ್ಷಯಂ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Guruliṅgajaṅgamavendu suḷiva aṇṇagaḷu nīvu kēḷire:
Dāsiya saṅgavuḷḷannakka guruvalla,
vēśiyasaṅgavuḷḷannakka liṅgavalla,
parastrīya saṅgavuḷḷannakka jaṅgamavalla.
Ī trividhasaṅgavuḷḷannakka guruliṅgajaṅgamavendu suḷidare
ippatteṇṭukōṭi naraka tappadu nōḍā.
Idakke vīrāgamē:
Dāsivēśiparastrīṇāṁ trividha saṅgayōgāyaḥ |
aṣṭavinśati kōṭyastu narakē kālamakṣayaṁ ||''
intendudāgi,
apramāṇakūḍalasaṅgamadēvā.