Index   ವಚನ - 785    Search  
 
ಉಕಾರದೊಳಗೆ ಉಕಾರವನರಿದು ಉಕಾರದೊಳಗೆ ಅಕಾರವನರಿದು ಉಕಾರದೊಳಗೆ ಮಕಾರವನರಿದು ಉಕಾರದೊಳಗೆ ಓಂಕಾರವನರಿದು ಉಕಾರದೊಳಗೆ ನಿರಾಳವನರಿದು ಉಕಾರದೊಳಗೆ ನಿರಂಜನವನರಿದು ಉಕಾರದೊಳಗೆ ನಿರಾಮಯವನರಿದು ಉಕಾರದೊಳಗೆ ನಿರಾಮಯಾತೀತವನರಿದು ಆ ನಿರಾಮಯಾತೀತದಲ್ಲಿ ಲೀಯವಾಗಿ ಸುಳಿವ ನಿಜಸುಳುಹಿಂಗೆ ಭವಂ ನಾಸ್ತಿಯಾದ ಬಳಿಕ ಗುರುಲಿಂಗಜಂಗಮವೆನ್ನಬಹುದು. ಆ ಮಹಾಶರಣನ- `ಓಂ ವಿಶ್ವಾಧಿಕೋ ರುದ್ರೋ ಮಹರ್ಷಿಃ ಮಹೇಶ ರುದ್ರಸ್ತಸ್ಮೈ ರುದ್ರಾಯ ನಮೋsಸ್ತು' ಎಂದು ಶ್ರುತಿಗಳು ಕೊಂಡಾಡುತ್ತಿಹವು ನೋಡಾ. ಅಪ್ರಮಾಣಕೂಡಲಸಂಗಮದೇವಾ.