Index   ವಚನ - 784    Search  
 
ಅಕಾರ ಉಕಾರ ಮಕಾರವನರಿದು ಅಕಾರದೊಳಗೆ ಅಕಾರವನರಿದು ಅಕಾರದೊಳಗೆ ಉಕಾರವನರಿದು ಅಕಾರದೊಳಗೆ ಮಕಾರವನರಿದು ಅಕಾರದೊಳಗೆ ಓಂಕಾರವನರಿದು ಅಕಾರದೊಳಗೆ ನಿರಾಳವನರಿದು ಅಕಾರದೊಳಗೆ ನಿರಂಜನವನರಿದು ಅಕಾರದೊಳಗೆ ನಿರಾಮಯವನರಿದು ಅಕಾರದೊಳಗೆ ನಿರಾಮಯಾತೀತವನರಿದು ನಿರಾಮಯಾತೀತದಲ್ಲಿ ನಿಷ್ಪತ್ತಿಯಾಗಿ ಸುಳಿವ ನಿಜಸುಳುಹಿಂಗೆ ನಮೋ ನಮೋ ಎನುತಿರ್ದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.