Index   ವಚನ - 786    Search  
 
ಮಕಾರದೊಳಗೆ ಮಕಾರವನರಿದು ಮಕಾರದೊಳಗೆ ಅಕಾರವನರಿದು ಮಕಾರದೊಳಗೆ ಉಕಾರವನರಿದು ಮಕಾರದೊಳಗೆ ಓಂಕಾರವನರಿದು ಮಕಾರದೊಳಗೆ ನಿರಾಳವನರಿದು ಮಕಾರದೊಳಗೆ ನಿರಂಜನವನರಿದು ಮಕಾರದೊಳಗೆ ನಿರಾಮಯವನರಿದು ಮಕಾರದೊಳಗೆ ನಿರಾಮಯಾತೀತವನರಿದು ಆ ನಿರಾಮಯಾತೀತದಲ್ಲಿ ಬೆರಸಿ ನಿಶ್ಚಿಂತನಾಗಿ ಸುಳಿವ ನಿಜಸುಳುಹಿಂಗೆ ಭವಂ ನಾಸ್ತಿಯೆಂದುದು ವೇದಂಗಳು. ಆ ಮಹಾಶರಣನೇ ಶಿವನೆಂದು ಕೊಂಡಾಡುತ್ತಿಹುದು ನೋಡಾ. ಇದಕ್ಕೆ ಶ್ರುತಿ: ಓಂ ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ | ಸ ಭೂಮಿಂ ವಿಶ್ವತೋವೃತ್ತ್ವಾ ಅತ್ಯತಿಷ್ಟದ್ದಶಾಂಗುಲಂ ||'' ಎಂದು ಶ್ರುತಿಗಳು ಹೊಗಳುತ್ತಿಹುದ ಮಹಾಗಮದಲ್ಲಿ ಹೇಳುತ್ತಿಹುದು ನೋಡಾ. ಅಪ್ರಮಾಣಕೂಡಲಸಂಗಮದೇವಾ.