Index   ವಚನ - 788    Search  
 
ಅಕಾರ ಉಕಾರ ಮಕಾರ ನಾದ ಬಿಂದು ಕಳೆಗಳ ತಿಳಿದು, ಪ್ರಣವಸ್ವರೂಪವನರಿದು, ನಿರಾಳ ನಿರಂಜನ ನಿರಾಮಯ ನಿರಾಮಯಾತೀತವನರಿದು, ಆ ನಿರಾಮಯಾತೀತದೊಳು ಮನ ಲೀಯವಾಗಿ ಸುಳಿವ ನಿಜಸುಳುಹಿಂಗೆ ನಮೋ ನಮೋ ಎಂಬೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.